BIG NEWS: ಪಠ್ಯ ಪುಸ್ತಕದಲ್ಲಿ ‘ಇಂಡಿಯಾ’ ಪದ ಬದಲು ‘ಭಾರತ’ ಎಂದು ಸೇರಿಸಲು NCERT ತೀರ್ಮಾನ

ನವದೆಹಲಿ: ಶಾಲಾ ಪಠ್ಯ ಪುಸ್ತಕಗಳಲ್ಲಿ ‘ಇಂಡಿಯಾ’ ಪದ ಬಳಕೆ ಬದಲು ‘ಭಾರತ’ ಎಂದು ಸೇರಿಸಲು ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಆಂಡ್ ಟ್ರೈನಿಂಗ್-NCERT ಸಮಿತಿ ನಿರ್ಧರಿಸಿದೆ.

ಶಾಲಾ ಪಠ್ಯಕ್ರಮವನ್ನು ಪರಿಶೀಲಿಸಲು ಎನ್ ಸಿ ಇಆರ್ ಟಿ ಸಮಾಜ ವಿಜ್ಞಾನಕ್ಕಾಗಿ ಉನ್ನತ ಮಟ್ಟದ ಸಮಿತಿ ರಚಿಸಿದ್ದು, ಈ ಸಮಿತಿಯು ಪಠ್ಯ ಪುಸ್ತಕಗಳಲ್ಲಿ ಇಂಡಿಯಾ ಪದವನ್ನು ಭಾರತ ಎಂದು ಬದಲಿಸುವಂತೆ ಸಲಹೆ ನೀಡಿದೆ. ಅಲ್ಲದೇ ಪಠ್ಯ ಕ್ರಮದಲ್ಲಿ ‘ಪ್ರಾಚೀನ ಇತಿಹಾಸ’ ಬದಲಿಗೆ ‘ಶಾಸ್ತ್ರೀಯ ಇತಿಹಾಸ’ ಸೇರಿಸಲು ಪ್ರಸ್ತಾಪಿಸಿದ್ದಾರೆ.

ಒಂದು ವೇಳೆ ಸಮಿತಿ ಸಲಹೆಯನ್ನು ಎನ್ ಸಿ ಇಆರ್ ಟಿ ಒಪ್ಪಿದರೆ ಮುಂದಿನ ವರ್ಷದಿಂದಲೇ ಪಠ್ಯ ಪುಸ್ತಕದಲ್ಲಿ ‘ಇಂಡಿಯಾ’ ಪದ ಬದಲಾಗಿ ‘ಭಾರತ’ ಪದ ಬಳಕೆ ಜಾರಿಯಾಗಲಿದೆ. ಈ ಪ್ರಸ್ತಾವನೆ ಬಗ್ಗೆ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read