HomeInternationalಹವಾಮಾನ ವರದಿ ಓದುವಾಗ ಸ್ನೂಪ್​ ಡಾಗ್​ ಸಾಹಿತ್ಯ: ಅಚ್ಚರಿ ವ್ಯಕ್ತಪಡಿಸಿದ ನೆಟ್ಟಿಗರು

ಹವಾಮಾನ ವರದಿ ಓದುವಾಗ ಸ್ನೂಪ್​ ಡಾಗ್​ ಸಾಹಿತ್ಯ: ಅಚ್ಚರಿ ವ್ಯಕ್ತಪಡಿಸಿದ ನೆಟ್ಟಿಗರು

ಕೆಲವರು ತಮ್ಮ ಕೆಲಸವನ್ನು ಅದೆಷ್ಟು ಎನ್​ಜಾಯ್​ ಮಾಡುತ್ತಾರೆ ಎನ್ನುವ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ವಿಮಾನದಲ್ಲಿ ಫ್ಲೈಟ್​ ಅಟೆಂಡೆಂಟ್​ ಆಗಿರಬಹುದು ಇಲ್ಲವೇ ಕಾರು, ವಾಹನಗಳ ಚಾಲಕರೇ ಆಗಿರಬಹುದು, ಇಲ್ಲವೇ ರಸ್ತೆ ಬದಿಯಲ್ಲಿ ಆಹಾರ ಮಾರುವವರೇ ಆಗಿರಬಹುದು…… ತಮ್ಮ ವೃತ್ತಿಯ ಮೇಲೆ ಅಪಾರ ಪ್ರೀತಿ ಇದ್ದರೆ ಅದನ್ನು ಸಾಕಷ್ಟು ಖುಷಿಯಿಂದ ನಿರ್ವಹಿಸುತ್ತಾರೆ, ಮತ್ತು ಇತರರನ್ನೂ ಖುಷಿಯಾಗಿ ಇಡುತ್ತಾರೆ.

ಇದೀಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. ಇದರಲ್ಲಿ ಟೆಕ್ಸಾಸ್ ಹವಾಮಾನ ತಜ್ಞರು ತಮ್ಮ ದೈನಂದಿನ ಹವಾಮಾನ ವರದಿಯಲ್ಲಿ ಸ್ನೂಪ್ ಡಾಗ್ ಸಾಹಿತ್ಯವನ್ನು ಸೇರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

CW39 ಹೂಸ್ಟನ್‌ನ ಮುಖ್ಯ ಹವಾಮಾನಶಾಸ್ತ್ರಜ್ಞ ಆಡಮ್ ಕ್ರೂಗರ್ ಅವರಿಗೆ ಅವರ ಅಭಿಮಾನಿಯೊಬ್ಬರು ಸವಾಲನ್ನು ಹಾಕಿದ್ದರು. ಅದನ್ನೇ ಸ್ವೀಕರಿಸಿದ ಅವರು, ಹವಾಮಾನದ ಮಾಹಿತಿ ನೀಡುವಾಗ ಸ್ನೂಪ್​ ಡಾಗ್​ ಸಾಹಿತ್ಯವನ್ನು ಸೇರಿಸಿದ್ದಾರೆ.

ಸ್ನೂಪ್ ಡಾಗ್‌ನ ಚೊಚ್ಚಲ ಏಕವ್ಯಕ್ತಿ ಏಕಗೀತೆ “ಹೂ ಆಮ್ ಐ (ವಾಟ್ಸ್ ಮೈ ನೇಮ್)?” ಸಾಹಿತ್ಯವನ್ನು ಅವರು ಬಳಸಿದ್ದು, ಇದೀಗ ಭಾರಿ ವೈರಲ್​ ಆಗಿದೆ.

For Latest News Updates, Join Our Whatsapp Community🚩
RELATED ARTICLES

Most Popular