ಅವಳಿ ಮಕ್ಕಳಾದರೂ ಹುಟ್ಟಿದ್ದು ಬೇರೆ ಬೇರೆ ವರ್ಷ….! ಇದೇನು ಅಂತೀರಾ…..?

ವಾಷಿಂಗ್ಟನ್: ಅವಳಿ ಮಕ್ಕಳು ಹುಟ್ಟಿದರೂ ಅವರು ಬೇರೆ ಬೇರೆ ವರ್ಷಗಳಲ್ಲಿ ಹುಟ್ಟಿರುವ ಕುತೂಹಲದ ಘಟನೆ ನಡೆದಿದೆ. ಕಲಿ ಜೋ ಎಂಬ ಅಮೇರಿಕನ್ ಮಹಿಳೆ ಮತ್ತು ಆಕೆಯ ಪತಿ ಕ್ಲಿಪ್​ಗೆ ಪ್ರತ್ಯೇಕ ವರ್ಷಗಳಲ್ಲಿ ಬೇರೆ, ಬೇರೆ ದಿನ ಅವಳಿ ಹೆಣ್ಣು ಮಕ್ಕಳು ಜನಿಸಿವೆ.

ಡಿಸೆಂಬರ್ 31 ರಂದು ರಾತ್ರಿ 11.55 ಕ್ಕೆ ತಮ್ಮ ಮೊದಲ ಮಗಳು ಅನ್ನಿ ಜೋಗೆ ಜನ್ಮ ನೀಡಿದ್ದರೆ, 2023ರ ಜನವರಿ 1 ರಂದು 12.01ಕ್ಕೆ ಎರಡನೇ ಮಗಳು ಎಫಿ ರೋಸ್‌ಗೆ ಜನ್ಮ ನೀಡಿದ್ದಾರೆ. ಮಧ್ಯರಾತ್ರಿಯ ಒಳಗೆಯೇ ಮಗು ಜನಿಸುತ್ತದೆ ಎಂದು ದಂಪತಿ ಭಾವಿಸಿದ್ದರು. ಆದರೆ ಎರಡು ಅವಳಿ ಮಗು ಬೇರೆ, ಬೇರೆ ದಿನ ಜನಿಸಿ ಅಚ್ಚರಿ ಮೂಡಿಸಿದೆ.

ಈ ಸಂತಸವನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ ದಂಪತಿ. ಆನ್ನಿ ಜೋ ಮತ್ತು ಎಫಿ ರೋಸ್ ಸ್ಕಾಟ್ ಇಬ್ಬರನ್ನು ಪರಿಚಯಿಸಲು ಬಹಳ ಹೆಮ್ಮೆಯಾಗುತ್ತಿದೆ. ಅನ್ನಿ 2022ರ ಕೊನೆಯಲ್ಲಿ ಜನಿಸಿದ ಮಗು. ನಂತರ ಎಫೀ 2023ರ ಆರಂಭದಲ್ಲಿ ಜನಿಸಿದ ಮೊದಲ ಮಗುವಾಗಿದ್ದಾಳೆ. ಇಬ್ಬರೂ ಆರೋಗ್ಯಕರವಾಗಿದ್ದಾರೆ ಮತ್ತು ಸಂತೋಷದಿಂದ ಇದ್ದಾರೆ. ಇಬ್ಬರ ತೂಕ 5.5 ಪೌಂಡ್​ ಇದೆ ಎಂದಿದ್ದಾರೆ. ನೆಟ್ಟಿಗರು ಅಚ್ಚರಿಯಿಂದ ಕಮೆಂಟ್​ಮಾಡುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read