ಕೋಲಾರ : ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ನಲ್ಲಿ ಭಯಾನಕ ಶಬ್ದ ಕೇಳಿಬಂದಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.
ಭಯಾನಕ ಶಬ್ದಕ್ಕೆ ಜನರು ಬೆಚ್ಚಿ ಬಿದ್ದಿದ್ದು, ಈ ವೇಳೆ ಜೆಟ್ ವಿಮಾನವೊಂದು ಹಾರಾಡಿದೆ. ಇದು ವಿಮಾನದ ಶಬ್ದವೋ ಅಥವಾ ಬೇರೆ ಯಾವುದಾದರೂ ಸ್ಪೋಟ ಸಂಭವಿಸಿದ್ಯಾ ಎಂಬುದು ತಿಳಿದು ಬಂದಿಲ್ಲ. ಭಾರಿ ಶಬ್ದ ಕೇಳಿಬಂದ ಹಿನ್ನೆಲೆ ಜನರು ಬೆಚ್ಚಿ ಬಿದ್ದಿದ್ದಾರೆ.