
ತುಮಕೂರು ನಗರದ ಶಿರಾ ಗೇಟ್ ನ ಎಸ್ ಮಾಲ್ ಬಳಿ ಈ ಘಟನೆ ನಡೆದಿದೆ. ಮೃತರನ್ನು ಶಾಂತಿನಗರ ನಿವಾಸಿ ರಾಜಣ್ಣ (64) ಎಂದು ಗುರುತಿಸಲಾಗಿದೆ.
ಮಾರ್ಕೆಟ್ ನಿಂದ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಸ್ಕೂಟರ್ ಗೆ ಲಾರಿ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಪರಿಣಾಮ ರಾಜಣ್ಣ ತಲೆ ಸಂಪೂರ್ಣ ಛಿದ್ರವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

