HomeKarnatakaBIG NEWS: ಟಿಟಿ ವಾಹನ-ಬೈಕ್ ಭೀಕರ ಅಪಘಾತ: ಸ್ಥಳದಲ್ಲೇ ವೈದ್ಯ ದುರ್ಮರಣ

BIG NEWS: ಟಿಟಿ ವಾಹನ-ಬೈಕ್ ಭೀಕರ ಅಪಘಾತ: ಸ್ಥಳದಲ್ಲೇ ವೈದ್ಯ ದುರ್ಮರಣ

ಬೀದರ್: ಸಾಲು ಸಾಲು ಅಪಘಾತ ಪ್ರಕರಣಗಳು ಸಂಭವಿಸಿತ್ತಿವೆ. ಟೆಂಪೋ ಟ್ರಾವೆಲರ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ವೈದರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಔರಾದ್ ನಲ್ಲಿ ನಡೆದಿದೆ.

ಇಲ್ಲಿನ ಮುಸ್ತಾಪುರ್ ಟೋಲ್ ಗೇಟ್ ಬಳಿ ಈ ಅಪಘಾತ ಸಂಭವಿಸಿದೆ. ಡಾ.ನೀಲಕಂಠ ಬೋಸ್ಲೆ (50) ಮೃತ ವೈದ್ಯರು. ಔರಾದ್ ನ ಸಂತಪುರ ನಿವಾಸಿ. ತಮ್ಮದೇ ಕ್ಲಿನಿಕ್ ಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಟಿಟಿ ವಾಹನ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ವೈದ್ಯ ಡಾ.ನೀಲಕಂಠ 10-15 ಅಡಿ ದೂರ ಹಾರಿ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

For Latest News Updates, Join Our Whatsapp Community🚩
RELATED ARTICLES

Most Popular