HomeEntertainment'ಟೆಂಪರ್' ಚಿತ್ರಕ್ಕೆ ಒಂಬತ್ತು ವರ್ಷದ ಸಂಭ್ರಮ

‘ಟೆಂಪರ್’ ಚಿತ್ರಕ್ಕೆ ಒಂಬತ್ತು ವರ್ಷದ ಸಂಭ್ರಮ

ಪೂರಿ ಜಗನ್ನಾಥ್ ನಿರ್ದೇಶನದ ಜೂನಿಯರ್ ಎನ್ಟಿಆರ್ ಅಭಿನಯದ ‘ಟೆಂಪರ್’ ಚಿತ್ರ 2015 ಫೆಬ್ರುವರಿ 13ರಂದು  ಬಿಡುಗಡೆಯಾಗಿತ್ತು, ಈ ಸಿನಿಮಾ ಟಾಲಿವುಡ್ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯುವ ಮೂಲಕ ಸಿನಿ ಪ್ರೇಕ್ಷಕರ ಗಮನ ಸೆಳೆದಿತ್ತು. ಈ ಚಿತ್ರ ತೆರೆ ಮೇಲೆ ಬಂದು ಇಂದಿಗೆ 9 ವರ್ಷಗಳಾಗಿದ್ದು, ಈ ಸಂತಸವನ್ನು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಈ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಮತ್ತು ಕಾಜಲ್ ಅಗರ್ವಾಲ್ ಪ್ರಮುಖ ಪಾತ್ರದಲ್ಲಿದ್ದು, ಪ್ರಕಾಶ್ ರಾಜ್ ಸೇರಿದಂತೆ ಅಪೂರ್ವ ಶ್ರೀನಿವಾಸನ್, ಸುಬ್ಬರಾಜು, ಅಮಿತ್ ತಿವಾರಿ, ಕೋಟಾ ಶ್ರೀನಿವಾಸ್ ರಾವ್, ಸಪ್ತಗಿರಿ, ಸೋನಿಯಾ ಅಗರ್ವಾಲ್, ಪವಿತ್ರ ಲೋಕೇಶ್, ಜಯಪ್ರಕಾಶ್ ರೆಡ್ಡಿ, ವೆನಿಲ್ಲಾ ಕಿಶೋರ್, ರಘು ಬಾಬು ತಾರಾ ಬಳಗದಲ್ಲಿದ್ದಾರೆ. ಪರಮೇಶ್ವರ ಹಾರ್ಟ್ ಪ್ರೊಡಕ್ಷನ್ ಬ್ಯಾನರ್ ನಡಿ ಗಣೇಶ್ ನಿರ್ಮಾಣ ಮಾಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular