BIG NEWS: ಮಹಿಳಾ ಟೆಲಿಕಾಲರ್ ಗೆ ಲೈಂಗಿಕ ಕಿರುಕುಳ; ಸಹಕರಿಸದಿದ್ದರೆ ಪತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಕಿರಾತಕ

ಬೆಂಗಳೂರು: ಮಹಿಳಾ ಟೆಲಿಕಾಲರ್ ಓರ್ವರಿಗೆ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ನೆಲಮಂಗಲದ ಮಹಿಳಾ ಟೆಲಿಕಾಲರ್ ಗೆ ಗುಬ್ಬಿ ಮೂಲದ ಶಿವರಾಮ್ ಎಂಬಾತ ಲೈಂಗಿಕ ಕಿರುಕುಳ ನೀಡುತ್ತಿದ್ದು, ನನ್ನ ಜೊತೆ ಸಹಕರಿಸದಿದ್ದರೆ ನಿನ್ನ ಪತಿಯನ್ನೇ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹಿಂಡಸಗೆರೆ ಗ್ರಾಮದ ನಿವಾಸಿ ಶಿವರಾಮ್ ಎಂಬಾತ, ಮಹಿಳಾ ಟೆಲಿಕಾರ್ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾನೆ. ನೀನು ನನಗೆ ಬೇಕು ಅಷ್ಟೇ. ನಿನ್ನನ್ನು ನಾನು ಇಷ್ಟ ಪಡುತ್ತೇನೆ ನನ್ನೊಂದಿಗೆ ಬರಬೇಕು. ನಿನ್ನ ಪತಿಯನ್ನು ಕೊಲೆ ಮಾಡುತ್ತೇನೆ. ಪತಿಯನ್ನು ಕೊಂದ ಮೇಲೆ ಸೂಸೈಡ್ ಮಾಡಿಕೊಳ್ಳಬೇಡ ಎಂದು ಸಂದೇಶವನ್ನು ರವಾನಿಸಿದ್ದಾನಂತೆ. ಈ ಬಗ್ಗೆ ಮಹಿಳಾ ಟೆಲಿಕಾಲರ್ ನೆಲಮಂಗಲ ಟೌನ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಐಪಿಸಿ ಸೆಕ್ಷನ್ 354 (ಎ), 354 (ಬಿ), 354 (ಸಿ), 323, 324, 448, 504, 506 ಅಡಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read