ನೂರಾರು ನಾಯಿಗಳ ಮಾರಣಹೋಮ; ಬೆಚ್ಚಿಬೀಳಿಸುತ್ತೆ ಹೆಣದ ರಾಶಿ

ಮಾನವನ ಕ್ರೌರ್ಯದ ಮತ್ತೊಂದು ಮುಖ ಅನಾವರಣ ಮಾಡುವ ಪ್ರಕರಣವೊಂದರಲ್ಲಿ, ಕೊಂದು ಹಾಕಲಾದ ಬೀದಿ ನಾಯಿಗಳ ದೇಹಗಳನ್ನು ತ್ಯಾಜ್ಯ ಬಿಸಾಡುವ ಜಾಗದಲ್ಲಿ ಹಾಕಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಪ್ರಾಣಿ ಹಕ್ಕುಗಳ ಕುರಿತಂತೆ ಸಾಕಷ್ಟು ದನಿಯೇರಿಸುವ ಚಾನೆಲ್ ಒಂದು ಇನ್‌ಸ್ಟಾಗ್ರಾಂನಲ್ಲಿ ಈ ಕುರಿತು ವರದಿ ಮಾಡಿದ್ದು, “ಶಮೀರ್‌ಪೇಟ್ ಮಂಡಲದ ತುರ್ಕಾಪಲ್ಲಿಯಲ್ಲಿ ನೂರಕ್ಕೂ ಹೆಚ್ಚಿನ ನಾಯಿಗಳ ಕೊಲೆ ಮಾಡಲಾಗಿದೆ,” ಎಂದು ತಿಳಿಸಿದೆ.

ಇದೇ ವೇಳೆ, ನಾಯಿಗಳ ಹೆಣದ ರಾಶಿಯ ಮನಕಲಕುವ ವಿಡಿಯೋವನ್ನೂ ಸಹ ಈ ಚಾನೆಲ್ ಶೇರ್‌ ಮಾಡಿದೆ.

ಗ್ರಾಮ ಪಂಚಾಯಿತಿ ಸಿಬ್ಬಂದಿಯ ಆದೇಶದ ಮೇರೆಗೆ ಹೀಗೆ ನಾಯಿಗಳನ್ನು ಕೊಂದಿರುವುದಾಗಿ ತಿಳಿದು ಬಂದಿದೆ.

ಪ್ರಾಣಿಪ್ರಿಯರು ಈ ಬಗ್ಗೆ ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದು, ಹೀಗೆ ಸಾಮೂಹಿಕವಾಗಿ ಕೊಲ್ಲುವ ಬದಲಿಗೆ ಸಂತಾನಹರಣ ಚಿಕಿತ್ಸೆ ಮಾಡಿಸಬಹುದಾಗಿತ್ತು ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read