HomeIndiaತಂಗಿ ಮದುವೆ ಸಂಭ್ರಮದಲ್ಲಿದ್ದ ವ್ಯಕ್ತಿ ಮೇಲೆ ಪತ್ನಿಯಿಂದ ಮನಬಂದಂತೆ ಹಲ್ಲೆ ! ಶಾಕಿಂಗ್‌ ದೃಶ್ಯ ಸಿಸಿ...

ತಂಗಿ ಮದುವೆ ಸಂಭ್ರಮದಲ್ಲಿದ್ದ ವ್ಯಕ್ತಿ ಮೇಲೆ ಪತ್ನಿಯಿಂದ ಮನಬಂದಂತೆ ಹಲ್ಲೆ ! ಶಾಕಿಂಗ್‌ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ | Watch

ಸಂಭ್ರಮ-ಸಡಗರದಿಂದ ನಡೆಯುತ್ತಿದ್ದ ಮದುವೆ ಮನೆಯೊಂದು ಕ್ಷಣಾರ್ಧದಲ್ಲಿ ರಣರಂಗವಾಗಿ ಮಾರ್ಪಟ್ಟ ಆಘಾತಕಾರಿ ಘಟನೆ ತೆಲಂಗಾಣದ ರಾಜನ್ನ ಸಿರಿಸಿಲ್ಲ ಜಿಲ್ಲೆಯಲ್ಲಿ ನಡೆದಿದೆ. ಸ್ವಂತ ತಂಗಿಯ ಮದುವೆ ಸಮಾರಂಭದಲ್ಲಿದ್ದ ವ್ಯಕ್ತಿಯೊಬ್ಬನ ಮೇಲೆ ಆತನ ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ನೂರಾರು ಜನರ ಸಮ್ಮುಖದಲ್ಲೇ ಏಕಾಏಕಿ ಮುಗಿಬಿದ್ದು, ಹಲ್ಲೆ ನಡೆಸಿ ಹೈಡ್ರಾಮಾ ಸೃಷ್ಟಿಸಿದ್ದಾರೆ.

ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ಮದುವೆ ಮಂಟಪದಲ್ಲೇ ನಡೆದ ಈ ಗಲಾಟೆ ಹಾಗೂ ಮಾರಾಮಾರಿ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.

ಮದುವೆ ಮಂಟಪದಲ್ಲಿ ನಡೆದಿದ್ದೇನು ?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿರಿಸಿಲ್ಲದ ಬಿವೈ ನಗರ ನಿವಾಸಿ ಕಸ್ತೂರಿ ಶ್ರವಣ್ ಕುಮಾರ್ ಎಂಬುವರ ಸಹೋದರಿ ಕಸ್ತೂರಿ ಸ್ವಾತಿ ಅವರ ವಿವಾಹವು ಪಟಾನ್‌ಚೆರುವಿನ ಶ್ರೀಕಾಂತ್ ಎಂಬುವರೊಂದಿಗೆ ಸಿವನಗರದ ಪ್ರಸಿದ್ಧ ಶಿವ ದೇವಾಲಯದ ಸಭಾಂಗಣದಲ್ಲಿ ನಡೆಯುತ್ತಿತ್ತು. ಸಂಬಂಧಿಕರು ಮತ್ತು ಅತಿಥಿಗಳು ಮದುವೆಯ ಸಂಭ್ರಮದಲ್ಲಿದ್ದಾಗ, ಶ್ರವಣ್ ಕುಮಾರ್ ಅವರ ಪತ್ನಿ ಸೌಮ್ಯಾ, ತನ್ನ ಪೋಷಕರು, ಸಹೋದರ ಹಾಗೂ ಇತರ ಸಂಬಂಧಿಕರ ದೊಡ್ಡ ಗುಂಪಿನೊಂದಿಗೆ ಏಕಾಏಕಿ ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಮದುವೆ ಮನೆಯಲ್ಲಿದ್ದ ಶ್ರವಣ್ ಕುಮಾರ್ ಅವರನ್ನು ಅಡ್ಡಗಟ್ಟಿದ ಪತ್ನಿಯ ಕುಟುಂಬಸ್ಥರು, “ಇಷ್ಟು ದಿನವಾದರೂ ಮಗಳನ್ನು ಸಂಸಾರಕ್ಕೆ ಏಕೆ ಕರೆದುಕೊಂಡು ಹೋಗಿಲ್ಲ?” ಎಂದು ಪ್ರಶ್ನಿಸಿ ವಾಗ್ವಾದಕ್ಕಿಳಿದಿದ್ದಾರೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ, ಸೌಮ್ಯಾ ಕಡೆಯವರು ನೂರಾರು ಜನರ ಮುಂದೆಯೇ ಶ್ರವಣ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಕಾರಿನಲ್ಲಿ ಅಪಹರಣಕ್ಕೆ ಯತ್ನ

ಪತ್ನಿಯ ಕಡೆಯವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಷ್ಟೇ ಅಲ್ಲದೆ, ತನ್ನನ್ನು ಬಲವಂತವಾಗಿ ಕಾರಿನಲ್ಲಿ ಎಳೆದೊಯ್ದು ಅಪಹರಿಸಲು ಯತ್ನಿಸಿದರು ಎಂದು ಸಂತ್ರಸ್ತ ಶ್ರವಣ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಪತ್ನಿಯನ್ನು ಮತ್ತೆ ಮನೆಗೆ ಕರೆದೊಯ್ಯದಿದ್ದರೆ ಜೀವಸಹಿತ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಅವರು ದೂರಿದ್ದಾರೆ.

ಮೂರು ವರ್ಷಗಳ ಹಿಂದಿನ ದಾಂಪತ್ಯ ಕಲಹ:

ಪೊಲೀಸರ ಪ್ರಕಾರ, ಗೋದಾವರಿಖನಿ ಮೂಲದ ಒಡ್ನಾಳ ಸೌಮ್ಯಾ ಹಾಗೂ ಕಸ್ತೂರಿ ಶ್ರವಣ್ ಕುಮಾರ್ ಅವರ ವಿವಾಹ ಸುಮಾರು ಮೂರು ವರ್ಷಗಳ ಹಿಂದೆ ನಡೆದಿತ್ತು. ಆದರೆ, ಮದುವೆಯಾದ ಕೆಲವೇ ತಿಂಗಳುಗಳಲ್ಲಿ ದಂಪತಿ ನಡುವೆ ಭಿನ್ನಾಭಿಪ್ರಾಯ ತಲೆದೋರಿತ್ತು.

ಈ ಹಿಂದೆ ಸೌಮ್ಯಾ ಅವರು ಗೋದಾವರಿಖನಿ ಪೊಲೀಸ್ ಠಾಣೆಯಲ್ಲಿ ಪತಿ ಶ್ರವಣ್ ಕುಮಾರ್ ಮತ್ತು ಅವರ ಕುಟುಂಬದವರ ವಿರುದ್ಧ ಕೌಟುಂಬಿಕ ದೌರ್ಜನ್ಯ ಹಾಗೂ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಸದ್ಯ ನ್ಯಾಯಾಲಯದ ವಿಚಾರಣೆಯಲ್ಲಿದೆ. ಈ ಹಳೆಯ ದ್ವೇಷ ಹಾಗೂ ಕಲಹವೇ ಈಗ ತಂಗಿಯ ಮದುವೆ ಸಮಾರಂಭದಲ್ಲಿ ಸ್ಫೋಟಗೊಳ್ಳಲು ಕಾರಣ ಎನ್ನಲಾಗಿದೆ.

ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರ ತನಿಖೆ

ಘಟನೆಗೆ ಸಂಬಂಧಿಸಿದಂತೆ ಶ್ರವಣ್ ಕುಮಾರ್ ನೀಡಿದ ದೂರಿನ ಮೇರೆಗೆ ಸಿರಿಸಿಲ್ಲ ನಗರ ಪೊಲೀಸರು ಪತ್ನಿ ಸೌಮ್ಯಾ ಹಾಗೂ ಆಕೆಯ ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮದುವೆ ಮಂಟಪದಲ್ಲೇ ನಡೆದ ಈ ಅಹಿತಕರ ಘಟನೆಯಿಂದಾಗಿ ಮದುವೆಗೆ ಬಂದಿದ್ದ ಅತಿಥಿಗಳು ಹಾಗೂ ಎರಡೂ ಕುಟುಂಬದವರು ತೀವ್ರ ಆತಂಕಕ್ಕೊಳಗಾಗಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular