HomeBeautyಹಲ್ಲು ಹಳದಿ ಬಣ್ಣಕ್ಕೆ ತಿರುಗಿದೆಯೇ.....? ಇದೊಂದು ಪದಾರ್ಥ ಬಳಸಿ ನೋಡಿ

ಹಲ್ಲು ಹಳದಿ ಬಣ್ಣಕ್ಕೆ ತಿರುಗಿದೆಯೇ…..? ಇದೊಂದು ಪದಾರ್ಥ ಬಳಸಿ ನೋಡಿ

ಮುಖದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಹಲ್ಲುಗಳು ಪ್ರಧಾನ ಪಾತ್ರ ವಹಿಸುತ್ತವೆ, ಕೆಲವೊಮ್ಮೆ ನಾವು ಎಷ್ಟೇ ಬ್ರಶ್​ ಮಾಡಿ ಏನೇ ಮಾಡಿದರೂ ಸಹ ಹಲ್ಲಿನ ಬಣ್ಣ ಮಾಸಿರುತ್ತದೆ. ಎಷ್ಟೇ ಪ್ರಯತ್ನಿಸಿದರೂ ಸಹ ಹಲ್ಲಿನ ಹೊಳಪು ಹೆಚ್ಚಾಗೋದೇ ಇಲ್ಲ. ನೀವು ಕೂಡ ಇಂತದ್ದೇ ಸಮಸ್ಯೆಯಿಂದ ಬಳಲಿದ್ದರೆ ನಿಮಗೊಂದು ಸಿಂಪಲ್​ ಟಿಪ್ಸ್​ ಇಲ್ಲಿದೆ.

ಇದಕ್ಕಾಗಿ ನೀವು ಹೆಚ್ಚೇನು ಮಾಡಬೇಕಿಲ್ಲ. ನಿಮ್ಮ ಮನೆಯಲ್ಲಿರುವ ಕೊಬ್ಬರಿ ಎಣ್ಣೆ ನಿಮ್ಮ ಈ ಸಮಸ್ಯೆಯನ್ನು ಕಡಿಮೆ ಮಾಡಬಲ್ಲದು. ಕೊಬ್ಬರಿ ಎಣ್ಣೆಯಲ್ಲಿ ಇರುವ ಲಾರಿಕ್​ ಆಮ್ಲವು ಹಲ್ಲಿನ ಆರೋಗ್ಯವನ್ನು ಕೆಡಿಸುವಂತಹ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿದೆ.

ನೀವು ವಾರದಲ್ಲಿ ಎರಡು ಬಾರಿ ಕೊಬ್ಬರಿ ಎಣ್ಣೆಯಿಂದ ಹಲ್ಲನ್ನು ಮಸಾಜ್​ ಮಾಡಬೇಕು, ಹೀಗೆ ಮಾಡೋದ್ರಿಂದ ಹಲ್ಲಿನ ಹೊಳಪು ಕ್ರಮೇಣವಾಗಿ ಹೆಚ್ಚೋದ್ರ ಜೊತೆ ಜೊತೆಯಲ್ಲಿ ದಂತ ಕ್ಷಯದ ಸಮಸ್ಯೆ ಕೂಡ ಮಾಯವಾಗುತ್ತದೆ. ಅಲ್ಲದೇ ಒಸಡುಗಳಲ್ಲಿ ಉಂಟಾಗುವ ಉರಿಯೂತವನ್ನೂ ಸಹ ಕೊಬ್ಬರಿ ಎಣ್ಣೆ ಶಮನ ಮಾಡುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular