Watch Video | ‌ʼನಾಟು ನಾಟುʼ ಹಾಡಿಗೆ ಮಸ್ತ್‌ ಸ್ಟೆಪ್ ಹಾಕಿದ ಟೀನೇಜ್ ಬಾಲೆ

ಆಸ್ಕರ್‌ ಪ್ರಶಸ್ತಿ ಜಯಿಸಿದಾಗಿನಿಂದ ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ಹಾಡು ಹಿಂದೆಂದಿಗಿಂತಲೂ ಹೆಚ್ಚು ವೈರಲ್ ಆಗಿದ್ದು, ಜಗತ್ತಿನಾದ್ಯಂತ ಈ ಹಾಡಿನ ಹುಕ್ ಸ್ಟೆಪ್ ಹಾಕುತ್ತಾ ವಿಡಿಯೋ ಮಾಡಿಕೊಂಡು ಆನ್ಲೈನ್‌ನಲ್ಲಿ ಶೇರ್‌ ಮಾಡಿಕೊಳ್ಳುವ ಮಂದಿ ದಿನೇ ದಿನೇ ಏರುತ್ತಿದ್ದಾರೆ.

ಟೀಂ ಇಂಡಿಯಾ ಕ್ರಿಕೆಟ್ ತಂಡ ಮಾಜಿ ನಾಯಕ ವಿರಾಟ್ ಕೊಹ್ಲಿರಿಂದ ಹಿಡಿದ ನಾರ್ವೇಯನ್ ನೃತ್ಯ ಸಮೂಹ ’ಕ್ವಿಕ್ ಸ್ಟೈಲ್’ವರೆಗೂ ನಾಟು ನಾಟು ಹಾಡಿಗೆ ಸ್ಟೆಪ್ ಹಾಕದೇ ಇರುವವರೇ ಇಲ್ಲ ಎಂಬಂತಾಗಿದೆ.

ಇದೀಗ ಟೀನೇಜ್ ಬಾಲೆಯೊಬ್ಬಳು ನಾಟು ನಾಟು ಹಾಡಿನ ಹುಕ್ ಸ್ಟೆಪ್ ಹಾಕುತ್ತಿರುವ ವಿಡಿಯೋವೊಂದನ್ನು ಹರ್ನಿಧ್‌ ಕೌರ್‌ ಸೋಧಿ ಎಂಬುವವರು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಈ ಹಾಡಿನಲ್ಲಿ ರಾಮ್ ಚರಣ್ ತೇಜಾ ಹಾಗೂ ಜೂ. ಎನ್‌ಟಿಆರ್‌ ಧರಿಸಿದ್ದ ರೀತಿಯ ಕಾಸ್ಟ್ಯೂಮ್‌ನಲ್ಲಿಯೇ ಮಿಂಚುತ್ತಿರುವ ಈಕೆ ಚಿತ್ರದಲ್ಲಿ ತೋರಿರುವಂತೆಯೇ ಸ್ಟೆಪ್ ಹಾಕುವ ಮೂಲಕ ನೆಟ್ಟಿಗರ ಚಪ್ಪಾಳೆಗೆ ಪಾತ್ರರಾಗಿದ್ದಾರೆ.

https://youtu.be/HAk35Q_Pb0A

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read