ಬೆಂಗಳೂರು: ಮಹಿಳಾ ಟೆಕ್ಕಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಎಸ್.ಜಿ.ಪಾಳ್ಯದಲ್ಲಿ ನಡೆದಿದೆ.
ಶಿಲ್ಪಾ ಮೃತ ಟೆಕ್ಕಿ. ಶಿಲ್ಪಾ ಎರಡು ವರ್ಷಗಳ ಹಿಂದೆ ಪ್ರವೀಣ್ ಎಂಬಾತನನ್ನು ವಿವಾಹವಾಗಿದ್ದರು. ಇದೀಗ ಏಕಾಏಕಿ ಶಿಲ್ಪಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಪ್ರವೀಣ್ ಹಾಗೂ ಕುಟುಂಬದವರೇ ಶಿಲ್ಪಾಳನ್ನು ಹತ್ಯೆಗೈದು ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆಂದು ಶಿಲ್ಪಾ ಪೋಷಕರು ದೂರು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಎಸ್.ಜಿಪಾಳ್ಯ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಿಲ್ಪಾ ಪತಿ ಪ್ರವೀಣ್ ನನ್ನು ಪೊಲೀಸರು ಬಂಧಿಸಿದ್ದಾರೆ.