HomeLatest Newsಸ್ನೇಹಿತೆಯ ಫ್ಲಾಟ್‌ಗೆ ಹೋಗಿ 21ನೇ ಮಹಡಿಯಿಂದ ಜಿಗಿದ ಟೆಕ್ಕಿ ; ಕೊನೆ ಕ್ಷಣದ ದೃಶ್ಯ ವೈರಲ್...

ಸ್ನೇಹಿತೆಯ ಫ್ಲಾಟ್‌ಗೆ ಹೋಗಿ 21ನೇ ಮಹಡಿಯಿಂದ ಜಿಗಿದ ಟೆಕ್ಕಿ ; ಕೊನೆ ಕ್ಷಣದ ದೃಶ್ಯ ವೈರಲ್ | Watch Video

ಪುಣೆ: ನಗರದಲ್ಲಿ ಮತ್ತೊಬ್ಬ ಟೆಕ್ಕಿ ಆತ್ಮಹತ್ಯೆ ಪ್ರಕರಣ ನಡೆದಿರುವುದು ಪುಣೆ ನಿವಾಸಿಗಳನ್ನು ಆಘಾತಕ್ಕೀಡು ಮಾಡಿದೆ. 25 ವರ್ಷದ ಐಟಿ ವೃತ್ತಿಪರರೊಬ್ಬರು ಪುಣೆಯ ಹಿಂಜವಾಡಿ ಪ್ರದೇಶದಲ್ಲಿರುವ ಸ್ನೇಹಿತೆಯ ಅಪಾರ್ಟ್‌ಮೆಂಟ್‌ನ 21ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರನ್ನು ಅಭೀಪ್ಸಾ ಭಾವುಸಾಹೇಬ್ ಕೋಟಿಂಭಿರೇ ಎಂದು ಗುರುತಿಸಲಾಗಿದೆ. ಮೇ 31ರಂದು ಹಿಂಜವಾಡಿ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಬುಧವಾರ ರಾತ್ರಿ ಆಕಸ್ಮಿಕ ಸಾವಿನ ವರದಿ ದಾಖಲಾಗಿದೆ.

ಅಂದು ಬೆಳಗ್ಗೆ 4:30ರ ಸುಮಾರಿಗೆ ಅಭೀಪ್ಸಾ ದ್ವಿಚಕ್ರ ವಾಹನದಲ್ಲಿ ಕ್ರೌನ್ ಗ್ರೀನ್ ಸೊಸೈಟಿಗೆ ಬಂದಿದ್ದರು. ನಂತರ ಅವರು ತಮ್ಮ ಸ್ನೇಹಿತೆಯ ನಿವಾಸವಿರುವ 21ನೇ ಮಹಡಿಗೆ ತೆರಳಿದ್ದು, ಅಲ್ಲಿಂದ ಜಿಗಿದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅವರು ಲಿಫ್ಟ್ ಮೂಲಕ 21ನೇ ಮಹಡಿಗೆ ಹೋಗಿದ್ದು, ಸುಮಾರು 4:42ರ ಸುಮಾರಿಗೆ ಜಿಗಿದಿದ್ದಾರೆ ಎಂದು ಅಂದಾಜಿಸಲಾಗಿದೆ. ಪಾರ್ಕಿಂಗ್ ಪ್ರದೇಶದಲ್ಲಿ ಪತ್ತೆಯಾದ ದ್ವಿಚಕ್ರ ವಾಹನದ ಮೂಲಕ ಅವರ ದೇಹವನ್ನು ಗುರುತಿಸಲಾಗಿದೆ.

ಆತ್ಮಹತ್ಯೆಗೂ ಕೆಲವೇ ನಿಮಿಷಗಳ ಮೊದಲು ಪುಣೆ ಟೆಕ್ಕಿ 21ನೇ ಮಹಡಿಯ ಕಟ್ಟಡದಿಂದ ಜಿಗಿಯುವ ಸಿಸಿಟಿವಿ ದೃಶ್ಯಾವಳಿ ಈಗ ಲಭ್ಯವಾಗಿದ್ದು, ಅದರಲ್ಲಿ ಅವರು ಲಿಫ್ಟ್‌ಗೆ ಪ್ರವೇಶಿಸುವಾಗ ಮುಖಕ್ಕೆ ಸ್ಕಾರ್ಫ್ ಕಟ್ಟಿಕೊಂಡಿರುವುದು ಕಂಡುಬಂದಿದೆ.

“ನನಗೆ ಬದುಕಿ ಸಾಕಾಗಿದೆ. ಇನ್ನೆಂದಿಗೂ ಬದುಕಲು ಇಷ್ಟವಿಲ್ಲ”

“ನನಗೆ ಬದುಕಿ ಸಾಕಾಗಿದೆ. ಇನ್ನೆಂದಿಗೂ ಬದುಕಲು ಇಷ್ಟವಿಲ್ಲ,” ಎಂದು ಟೆಕ್ಕಿ ಬರೆದಿಟ್ಟ ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಪಿಂಪ್ರಿ ಚಿಂಚ್‌ವಾಡ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪತ್ರದಲ್ಲಿ, ಈ ತೀವ್ರ ಕ್ರಮ ಕೈಗೊಂಡಿದ್ದಕ್ಕಾಗಿ ಅವರು ತಮ್ಮ ಪೋಷಕರು ಮತ್ತು ಸ್ನೇಹಿತರಲ್ಲಿ ಕ್ಷಮೆಯಾಚಿಸಿದ್ದಾರೆ.

ತನಿಖೆ ವೇಳೆ, ಅಭೀಪ್ಸಾರೊಂದಿಗೆ ವಾಸವಿದ್ದ ಸ್ನೇಹಿತೆ, ಅಭೀಪ್ಸಾರನ್ನು ಕೊನೆಯದಾಗಿ ರಾತ್ರಿ 1 ಗಂಟೆಗೆ ಕೊಠಡಿಯಲ್ಲಿ ನೋಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ನಂತರ, ಸ್ನಾನಗೃಹದ ಗೋಡೆ, ಹಾಸಿಗೆ ಮತ್ತು ಕರವಸ್ತ್ರದ ಮೇಲೆ ರಕ್ತದ ಕಲೆಗಳು ಕಂಡುಬಂದಿವೆ, ಆದರೆ ಆರಂಭದಲ್ಲಿ ಇದನ್ನು ಗಮನಿಸಿರಲಿಲ್ಲ. ಬೆಳಗ್ಗೆ 10 ಗಂಟೆಯಾದರೂ ಅಭೀಪ್ಸಾ ಹಿಂತಿರುಗದಿದ್ದಾಗ, ಅವರ ಸ್ನೇಹಿತೆ ಸಂಪರ್ಕಿಸಲು ಪ್ರಯತ್ನಿಸಿದ್ದರೂ, ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಸ್ವಲ್ಪ ಸಮಯದ ನಂತರ ಪೊಲೀಸರಿಂದ ಅವರ ಸಾವಿನ ಸುದ್ದಿ ಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular