SHOCKING : ‘ಲೈಂಗಿಕ ಕ್ರಿಯೆ’ಗೆ ಒಪ್ಪದ ಯುವತಿಗೆ ಚಾಕು ಇರಿತ, ಬೆಂಗಳೂರಲ್ಲಿ ಆರೋಪಿ ಟೆಕ್ಕಿ ಅರೆಸ್ಟ್.!


ಬೆಂಗಳೂರು: ಲೈಂಗಿಕ ಕ್ರಿಯೆಗೆ ಒಪ್ಪದ ಯುವತಿಗೆ ಟೆಕ್ಕಿಯೋರ್ವ ಚಾಕು ಇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮದುವೆಯಾಗಿ ಮಕ್ಕಳಿದ್ರೂ ಯುವತಿ ಮೇಲೆ ಕಣ್ಣು ಹಾಕಿದ ಅಸಾಮಿ ಲೈಂಗಿಕ ಕ್ರಿಯೆಗೆ ಪೀಡಿಸಿ ಚಾಕು ಇರಿದಿದ್ದಾನೆ. ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಈ ಘಟನೆ ನಡೆದಿದೆ.

ವೈಟ್ ಫೀಲ್ಡ್ ನಲ್ಲಿರುವ ಕೋ-ಲಿವಿಂಗ್ ಪಿಜಿಯಲ್ಲಿ ಯುವತಿ ಹಾಗೂ ಆರೋಪಿ ಸಾಫ್ಟ್ ವೇರ್ ಇಂಜಿನಿಯರ್ ವಾಸವಾಗಿದ್ದರು. ಆಂಧ್ರಪ್ರದೇಶ ಮೂಲದ ಬಾಬು ಎಂಬ ಸಾಫ್ಟ್ ವೇರ್ ಇಂಜಿನಿಯರ್ ಮದುವೆಯಾಗಿ ಇಬ್ಬರು ಮಕ್ಕಳ ಜೊತೆ ಪಿಜಿಯಲ್ಲಿ ವಾಸವಾಗಿದ್ದ. ಅದೇ ಪಿಜಿಯಲ್ಲಿ ಯುವತಿ ಕೂಡ ವಾಸವಾಗಿದ್ದಳು.

ಒಂದೇ ಪಿಜಿ ಇಬ್ಬರ ನಡುವೆ ಪರಿಚಯ, ಸ್ನೇಹ. ಯುವತಿಯ ಖಾಸಗಿ ಫೋಟೋ ಇಟ್ಟುಕೊಂಡು ಬಾಬು 70 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ. ಯುವತಿ ತನ್ನ ಬಳಿ ಹಣವಿಲ್ಲ ಎಂದಾಗ ಆಕೆಯ ಮೊಬೈಲ್ ಕಸಿದಿಕೊಂಡು ಕೆಲ ಹಣ ವರ್ಗಾಯಿಸಿಕೊಂಡಿದ್ದನಂತೆ. ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ಯುವತಿ ಹಣವಿಲ್ಲ ಸಾಲ ಮಾಡಿ ಕೊಡುವುದಾಗಿ ಹೇಳಿದ್ದಳಂತೆ ಇದೇ ವಿಚಾರವಾಗಿ ಗಲಾಟೆ ಮಾಡಿದ ಬಾಬು ಯುವತಿಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ್ದಾನೆ.ಹಲ್ಲೆಗೊಳಗದ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು,. ಸದ್ಯ ಆರೋಪಿ ಬಾಬು ನನ್ನು ವೈಟ್ ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read