HomeEntertainment'ಮಿಸ್ಟರ್ ಬಚ್ಚನ್' ಚಿತ್ರದ ಟೀಸರ್ ರಿಲೀಸ್

‘ಮಿಸ್ಟರ್ ಬಚ್ಚನ್’ ಚಿತ್ರದ ಟೀಸರ್ ರಿಲೀಸ್

ರವಿತೇಜ ಅಭಿನಯದ ಹರೀಶ್ ಶಂಕರ್ ನಿರ್ದೇಶನದ ಬಹುನಿರೀಕ್ಷಿತ ‘ಮಿಸ್ಟರ್ ಬಚ್ಚನ್’ ಚಿತ್ರ ಆಗಸ್ಟ್ 15ಕ್ಕೆ ತೆರೆ ಮೇಲೆ ಬರುತ್ತಿತ್ತು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಇದರ ಟೀಸರ್ ನಿನ್ನೆಯಷ್ಟೇ ಪೀಪಲ್ ಮೀಡಿಯಾ ಫ್ಯಾಕ್ಟರಿ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ನೋಡುಗರ ಗಮನ ಸೆಳೆದಿದೆ.

ಈ ಚಿತ್ರವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ನಲ್ಲಿ ಟಿಜಿ ವಿಶ್ವ ಪ್ರಸಾದ್ ನಿರ್ಮಾಣ ಮಾಡಿದ್ದು, ರವಿತೇಜ ಅವರಿಗೆ ಜೋಡಿಯಾಗಿ ಭಾಗ್ಯಶ್ರೀ ಬೋರ್ಸೆ ಅಭಿನಯಿಸಿದ್ದಾರೆ. ಇನ್ನುಳಿದಂತೆ ಸತ್ಯಂ ರಾಜೇಶ್, ಜಗಪತಿ ಬಾಬು, ಝಾನ್ಸಿ, ತಣಿಕೆಲ್ಲ ಭರಣಿ, ಸಚಿನ್ ಖೇಡೇಕರ್, ತೆರೆ ಹಂಚಿಕೊಂಡಿದ್ದಾರೆ. ಉಜ್ವಲ್ ಕುಲಕರ್ಣಿ ಸಂಕಲನ, ಹಾಗೂ ರಾಮ್ ಲಕ್ಷ್ಮಣ್ ಮತ್ತು ಪೃಥ್ವಿ ಸಾಹಸ ನಿರ್ದೇಶನವಿದೆ. ಮಿಕ್ಕಿ ಜೆ ಮೇಯರ್ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular