HomeLatest Newsಕೆಟ್ಟ ಮೇಲೆ ಬುದ್ದಿ ಕಲಿತ ಉಪನಾಯಕನನ್ನೇ ತಂಡದಿಂದ ಹೊರಗಿಟ್ಟಿದ್ದ ಸೂರ್ಯ; ಜಿಂಬಾಬ್ವೆ ವಿರುದ್ಧ ಸಂಜುಗೆ ಸ್ಥಾನ;...

ಕೆಟ್ಟ ಮೇಲೆ ಬುದ್ದಿ ಕಲಿತ ಉಪನಾಯಕನನ್ನೇ ತಂಡದಿಂದ ಹೊರಗಿಟ್ಟಿದ್ದ ಸೂರ್ಯ; ಜಿಂಬಾಬ್ವೆ ವಿರುದ್ಧ ಸಂಜುಗೆ ಸ್ಥಾನ; ಇಬ್ಬರು ಔಟ್

ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಹಂತದಲ್ಲಿ ಭಾರತ ಹಾಗೂ ಜಿಂಬಾಬ್ವೆ ತಂಡಗಳು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಜಿಂಬಾಬ್ವೆ ಬೌಲಿಂಗ್ ಆರಿಸಿಕೊಂಡು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ.

ಟಾಸ್ ಸೋತ ಬಳಿಕ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್ ಕಳೆದ ಪಂದ್ಯದಲ್ಲಿ ಮಾಡಿದ್ದ ತಪ್ಪುಗಳನ್ನು ತಿದ್ದಿಕೊಂಡಿದ್ದಾರೆ. ರಿಂಕು ಸಿಂಗ್ ಕುಟುಂಬ ಸಮಸ್ಯೆಯಿಂದಾಗಿ ತೆರಳಿದ್ದು, ಅದೇ ಜಾಗಕ್ಕೆ ಸಂಜು ಸ್ಯಾಮ್ಸನ್ ಅವರನ್ನು ಕರೆತಂದಿದ್ದಾರೆ. ಆದರೂ ಕಳೆದ ಪಂದ್ಯದಲ್ಲಿ ತಂಡ ಹೀನಾಯ ಪ್ರದರ್ಶನ ಕಂಡ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವುದು ಅಷ್ಟೇ ಸತ್ಯ.

ಏಕೆಂದರೆ ಸಂಜು ಸ್ಯಾಮ್ಸನ್ ತಂಡಕ್ಕೆ ಬರುತ್ತಿದ್ದಂತೆ ಅವರಿಗೆ ಆರಂಭಿಕನ ಸ್ಥಾನ ನೀಡಿ ಇಶಾನ್ ಕಿಶನ್‌ರನ್ನು ಮೂರನೇ ಕ್ರಮಾಂಕಕ್ಕೆ ತಳ್ಳಲಾಗಿದೆ. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಟಿ ಟ್ವೆಂಟಿಯಲ್ಲೂ ಏಕದಿನ ಮಾದರಿಯಲ್ಲಿ ಆಟವಾಡುತ್ತಿದ್ದ ತಿಲಕ್ ವರ್ಮಾರನ್ನು ಐದನೇ ಕ್ರಮಾಂಕಕ್ಕೆ ಹಾಕಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಕಳೆದ ಪಂದ್ಯದಲ್ಲಿ ಭಾರತ ವೇಗವಾಗಿ ತನ್ನ ಟಾಪ್ ಆರ್ಡರ್ ಕಳೆದುಕೊಂಡಾಗ ಕಣಕ್ಕಿಳಿದು ಒತ್ತಡವನ್ನು ನಿಭಾಯಿಸಬಲ್ಲ ಸಾಮರ್ಥ್ಯವಿದ್ದ ತಂಡದ ಉಪ ನಾಯಕ ಅಕ್ಸರ್ ಪಟೇಲ್‌ರನ್ನು ಬೆಂಚ್ ಕಾಯಲು ಹೇಳಿ ವಾಷಿಂಗ್ಟನ್ ಸುಂದರ್‌ನನ್ನು ಕಣಕ್ಕಿಳಿಸಿ ತಲೆಕೆಟ್ಟ ಕೆಲಸ ಮಾಡಿದ್ದ ಸೂರ್ಯಕುಮಾರ್ ಯಾದವ್ ಈ ಪಂದ್ಯದಿಂದ ಸುಂದರ್‌ನನ್ನು ಹೊರಗಿಟ್ಟು ಅಕ್ಸರ್ ಪಟೇಲ್‌ರನ್ನು ವಾಪಸ್ ತಂಡಕ್ಕೆ ಕರೆತಂದಿದ್ದಾರೆ.

ಹೀಗೆ ಕಳೆದ ಪಂದ್ಯದಲ್ಲಿ ಮಾಡಿದ ತಪ್ಪಿನಿಂದ ಭಾರೀ ಟೀಕೆ ಹಾಗೂ ಟ್ರೋಲ್ ಎದುರಿಸಿದ ಭಾರತ ತಂಡ ತನ್ನ ಆಡುವ ಬಳಗದಲ್ಲಿ ಮಾಡಿಕೊಂಡಿರುವ ಬದಲಾವಣೆ ತಂಡದ ಓಪನಿಂಗ್ ಮೇಲೆ ಪ್ರಭಾವ ಬೀರಿದ್ದು, ತಂಡ ಉತ್ತಮ ಆರಂಭ ಪಡೆದುಕೊಂಡಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular