HomeIndiaಹಾಡಹಗಲೇ ವಿದ್ಯಾರ್ಥಿಗಳಿಂದ ಶಿಕ್ಷಕನ ಮೇಲೆ ಗುಂಡಿನ ದಾಳಿ.....!

ಹಾಡಹಗಲೇ ವಿದ್ಯಾರ್ಥಿಗಳಿಂದ ಶಿಕ್ಷಕನ ಮೇಲೆ ಗುಂಡಿನ ದಾಳಿ…..!

ಆಗ್ರಾ: ವಿದ್ಯಾರ್ಥಿಗಳಿಬ್ಬರು ಶಿಕ್ಷಕನ ಮೇಲೆಯೇ ಗುಂಡಿನ ದಾಳಿ ನಡೆಸಿರುವ ಘಟನೆ ಆಗ್ರಾದ ಖಂದೌಲಿ ಪ್ರದೇಶದಲ್ಲಿ ನಡೆದಿದೆ.

ಗಂಭೀರವಾಗಿ ಗಾಯಗೊಂಡಿರುವ ಶಿಕ್ಷಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡಿನ ದಾಳಿ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೊಂದನ್ನು ಹರಿಬಿಟ್ಟಿರುವ ಆರೋಪಿ ವಿದ್ಯಾರ್ಥಿಗಳು ಕೇವಲ ಒಂದು ಗುಂಡು ಮಾತ್ರ ಹಾರಿಸಿದ್ದೇವೆ. ಇನ್ನೂ ಬಾಕಿಯಿದೆ ಎಂದು ಆವಾಜ್ ಹಾಕಿ ಬೆದರಿಕೆಯೊಡ್ಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೊಲೀಸರ ಮಾಹಿತಿ ಪ್ರಕಾರ ಮಾಲುಪುರ ನಿವಾಸಿ ಸುಮಿತ್ ರಾಮಸ್ವರೂಪ್ ಶಾಲಾ ಶಿಕ್ಷಕರಾಗಿದ್ದು, ಶಾಲೆ ಮುಗಿದ ಬಳಿಕ ತಮ್ಮದೇ ಕೋಚಿಂಗ್ ಸೆಂಟರ್ ನಲ್ಲಿ ಕೋಚಿಂಗ್ ಹೇಳುತ್ತಿದ್ದರು. ಬೈಕ್ ನಲ್ಲಿ ಬಂದ ಇಬ್ಬರು ಹಳೇ ವಿದ್ಯಾರ್ಥಿಗಳು, ಕೋಚಿಂಗ್ ಸೆಂಟರ್ ನಲ್ಲಿ ಕ್ಲಾಸ್ ನಡೆಸುತ್ತಿದ್ದ ಸುಮಿತ್ ಹಾಗೂ ಇನ್ನೋರ್ವ ಶಿಕ್ಷಕನನ್ನು ಕೂಗಿ ಕರೆದಿದ್ದಾರೆ. ಹೊರಗೆ ಬರುತ್ತಿದ್ದಂತೆ ಓರ್ವ ವಿದ್ಯಾರ್ಥಿ ತನ್ನ ಕೈಲಿದ್ದ ಬಂದೂಕಿನಿಂದ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ.

ಶಿಕ್ಷಕ ಸುಮಿತ್ ಕಾಲಿಗೆ ಗುಂಡೇಟು ತಗುಲಿದೆ. ತಕ್ಷಣ ಸ್ಥಳದಲ್ಲಿದ್ದವರು ಶಿಕ್ಷಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪ್ರಾಪ್ತ ವಿದ್ಯಾರ್ಥಿಗಳಿಂದ ಈ ದಾಳಿ ನಡೆದಿದೆ. ಪ್ರಕರಣ ದಾಖಲಿಸಿಕೊಂಡು, ವಿದ್ಯಾರ್ಥಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular