HomeKarnatakaಶಿಕ್ಷಕರ ಕೊಡುಗೆ ಗೌರವಿಸಲು ಹೆಸರಿನ ಮೊದಲು Tr. ಪದ ಬಳಕೆ: ಸರ್ಕಾರದಿಂದ ಅಧಿಕೃತ ಆದೇಶ

ಶಿಕ್ಷಕರ ಕೊಡುಗೆ ಗೌರವಿಸಲು ಹೆಸರಿನ ಮೊದಲು Tr. ಪದ ಬಳಕೆ: ಸರ್ಕಾರದಿಂದ ಅಧಿಕೃತ ಆದೇಶ

ಬೆಂಗಳೂರು: ಶಿಕ್ಷಕರ ಅತ್ಯಮೂಲ್ಯ ಕೊಡುಗೆಯನ್ನು ಗೌರವಿಸಲು ಸರ್ಕಾರ ನಿರ್ಧರಿಸಿದ್ದು, ಇನ್ನು ಮುಂದೆ ಹೆಸರಿನ ಮೊದಲು Tr.(Teacher) ಎಂಬ ಪೂರ್ವ ಪd ಬಳಕೆ ಮಾಡಲಾಗುವುದು. ಶಿಕ್ಷಕರ ದಿನಾಚರಣೆ ಅಂಗವಾಗಿ ಗೌರವ ಪೂರ್ವಕವಾಗಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಅಧಿಕೃತ ಆದೇಶ ಪ್ರಕಟಿಸಲಾಗಿದೆ. ಕರ್ನಾಟಕದ ಸುಮಾರು 4.5 ಲಕ್ಷ ಶಿಕ್ಷಕರಿಗೆ ಗೌರವ ಸಿಗಲಿದೆ.

ಸಮಾಜದ ನಿರ್ಮಾಣ ಮತ್ತು ಪ್ರಗತಿಯಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶ್ರೇಯೋಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಶಿಕ್ಷಕರ ಅತ್ಯಮೂಲ್ಯ ಕೊಡುಗೆಯನ್ನು ಸ್ಮರಿಸಲು 2026 ಶಿಕ್ಷಕರ ದಿನಾಚರಣೆಯಂದು ಎಲ್ಲಾ ಶಿಕ್ಷಕರುಗಳ ಹೆಸರುಗಳ ಪೂರ್ವದಲ್ಲಿ “Tr” (Teacher) ಎಂಬ ಪೂರ್ವಪ್ರತ್ಯಯ ಶೀರ್ಷಿಕೆಯನ್ನು ಇನ್ನು ಮುಂದೆ ಬಳಸಲು ಅನುಮತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಇದು ರಾಜ್ಯದ ಎಲ್ಲಾ ಶಿಕ್ಷಕರಿಗೆ ಸಂದ ಗೌರವವಾಗಿದೆ.

ಶಿಕ್ಷಕರ ಹೆಸರುಗಳ ಪೂರ್ವದಲ್ಲಿ Tr (Teacher-ಶಿಕ್ಷಕ) ಎಂಬ ಶೀರ್ಷಿಕೆಯನ್ನು (Title) ಬಳಸಲು ಅನುಮತಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಸ್ತಾವನೆ

ಉತ್ತಮ ಸಮಾಜ ನಿರ್ಮಾಣದಲ್ಲಿ ಮತ್ತು ಪುಗತಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ವಿದ್ಯಾರ್ಥಿಗಳಿಗೆ ಜ್ಞಾನದ ಪ್ರಸಾರ- ಅಕ್ಷರಜ್ಞಾನ, ವೈಜ್ಞಾನಿಕ ಮತ್ತು ಪ್ರಾಯೋಗಿಕ ಮಾಹಿತಿಯನ್ನು ಒದಗಿಸುವ ಮೂಲಕ ಅವರ ಬೌದ್ಧಿಕ ಬೆಳವಣಿಗೆಗೆ ಅಡಿಪಾಯ ಹಾಕುತ್ತಾರೆ. ಸಂಸ್ಕಾರ ಮತ್ತು ಮೌಲ್ಯಗಳ ರೂಢಿ- ಸತ್ಸವರ್ತನೆ, ಶಿಸ್ತು, ಪ್ರಾಮಾಣಿಕತೆ, ಮತ್ತು ಪರಸ್ಪರ ಗೌರವದಂತಹ ಮಾನವೀಯ ಮೌಲ್ಯಗಳನ್ನು ಕಲಿಸಿ ಸಮಾಜಮುಖಿಯಾಗಿ ಬದುಕಲು ಮಾರ್ಗದರ್ಶನ ಮಾಡುತ್ತಾರೆ ವ್ಯಕ್ತಿತ್ವ ವಿಕಸನ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬಿ, ಸವಾಲುಗಳನ್ನು ಹಾಗೂ ವೈಫಲ್ಯಗಳನ್ನು ಧೈರ್ಯದಿಂದ ಎದುರಿಸುವ ಶಕ್ತಿಯನ್ನು ಒದಗಿಸುವುದರಿಂದ ಶಿಸ್ತು, ಸಮಯ ಪ್ರಜ್ಞೆ ಹಾಗೂ ನೈತಿಕ ಮೌಲ್ಯಗಳನ್ನು ಕಲಿಸುತ್ತಾರೆ. ಮಕ್ಕಳಲ್ಲಿ ಯಾವುದೇ ಭಯವಿಲ್ಲದೇ ಪ್ರಶ್ನಿಸುವ ಆತ್ಮಸ್ಥೆರ್ಯವನ್ನು ತುಂಬುತ್ತಾರೆ. ಅಲ್ಲದೇ, ಸಾಂವಿಧಾನಿಕ ಮೌಲ್ಯಗಳನ್ನು ಮಕ್ಕಳಲ್ಲಿ ರೂಢಿಸುತ್ತಾರೆ. ಪ್ರತಿಭೆ ಗುರುತಿಸುವಿಕೆ-ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಕೌಶಲ್ಯಗಳನ್ನು ಹೊರತರುತ್ತಾರೆ. ಮಾರ್ಗದರ್ಶನ- ಸರಿಯಾದ ವೃತ್ತಿಜೀವನ (Career) ಆಯ್ಕೆ ಮಾಡಿಕೊಳ್ಳಲು ದಾರಿ ದೀಪವಾಗುತ್ತಾರೆ. ಆತ್ಮವಿಶ್ವಾಸ ವೃದ್ಧಿ- ಸೋತಾಗ ಧೈರ್ಯ ತುಂಬಿ, ಸಾಧನೆ ಮಾಡಲು ಪ್ರೇರೇಪಿಸುತ್ತಾರೆ. ಪ್ರಗತಿಪರ ಚಿಂತನೆ ಸಮಾಜದಲ್ಲಿರುವ ಮೂಢನಂಬಿಕೆಗಳನ್ನು ಹೋಗಲಾಡಿಸಿ, ವೈಜ್ಞಾನಿಕ ಮನೋಭಾವ ಹಾಗೂ ಸೃಜನಶೀಲತೆಯನ್ನು ಉತ್ತೇಜಿಸುವ ಮೂಲಕ ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕಾರಣರಾಗುತ್ತಾರೆ.

ಶಿಕ್ಷಕರು ಸಾಂವಿಧಾನಿಕ ಮೌಲ್ಯಗಳನ್ನು ಒಳಗೊಂಡ ಉತ್ತಮ ನಾಗರಿಕರ ನಿರ್ಮಾಣ ಮಾಡಲು ದೇಶದ ಜವಾಬ್ದಾರಿಯುತ ಪ್ರಜೆಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಾರೆ. ಸಮಾಜ ಘಾತುಕ ಕೃತ್ಯಗಳನ್ನು ನಡೆಸದಿರಲು ಉತ್ತಮ ಶಿಕ್ಷಣವನ್ನು ನೀಡುತ್ತಾರೆ. ಸಮಾಜದಲ್ಲಿನ ಮೂಢನಂಬಿಕೆ ಮತ್ತು ಅಜ್ಞಾನವನ್ನು ತೊಡೆದುಹಾಕಲು ಶ್ರಮಿಸುತ್ತಾರೆ. ದೇಶಕ್ಕೆ ವೈದ್ಯರು, ಇಂಜಿನಿಯರ್‌ಗಳು, ವಿಜ್ಞಾನಿಗಳು ಮತ್ತು ನಾಯಕರನ್ನು ಹಾಗೂ ವೃತ್ತಿಪರರನ್ನು ರೂಪಿಸುತ್ತಾರೆ. ಜಾತಿ, ಧರ್ಮ ಭೇದವಿಲ್ಲದೆ ಎಲ್ಲರಿಗೂ ಸಮಾನ ಶಿಕ್ಷಣ ನೀಡಿ ಸಾಮಾಜಿಕ ಸಾಮರಸ್ಯ ಬೆಳೆಸುತ್ತಾರೆ. ಮುಂದಿನ ಪೀಳಿಗೆಗೆ ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ದಾಟಿಸುವುದರ ಮೂಲಕ ಸಂಸ್ಕೃತಿಯ ರಕ್ಷಣೆಯನ್ನು ಮಾಡುತ್ತಾರೆ.

ರಾಷ್ಟ್ರವನ್ನು ನಿರ್ಮಿಸುವ ಪ್ರತಿಯೊಬ್ಬ ವ್ಯಕ್ತಿಯನ್ನು ಒಬ್ಬ ಶಿಕ್ಷಕ ನಿರ್ಮಿಸುತ್ತಾನೆ. ಕರ್ನಾಟಕದಲ್ಲಿ ಸುಮಾರು 4.5 ಲಕ್ಷ ಶಿಕ್ಷಕರು ಸೇರಿದಂತೆ ಭಾರತದ ಒಂದು ಕೋಟಿಗೂ ಹೆಚ್ಚು ಶಿಕ್ಷಕರು ಪ್ರತಿದಿನ ನಮ್ಮ ಮಕ್ಕಳ ಮನಸ್ಸು, ಪಾತ್ರ ಮತ್ತು ಭವಿಷ್ಯವನ್ನು ರೂಪಿಸುತ್ತಿದ್ದಾರೆ. ಗುಣಪಡಿಸುವ ಪ್ರತಿಯೊಬ್ಬ ವೈದ್ಯರು, ಕಟ್ಟಡ ನಿರ್ಮಿಸುವ ಇಂಜಿನಿಯರ್, ನಮಗೆ ಆಹಾರ ನೀಡುವ ರೈತ ಸೇವೆ ಸಲ್ಲಿಸುವ ಅಧಿಕಾರಿ, ಉದ್ಯೋಗ ಸೃಷ್ಟಿಸುವ ಉದ್ಯಮಿ ಮತ್ತು ನಮಗೆ ಮಾರ್ಗದರ್ಶನ ನೀಡುವ ನಾಯಕನ ಹಿಂದೆ ಒಬ್ಬ ಶಿಕ್ಷಕ/ಶಿಕ್ಷಕಿ ಇರುತ್ತಾರೆ. ಅವರು ಮೊದಲು ತಮ್ಮ ಸಾಮರ್ಥ್ಯವನ್ನು ಗುರುತಿಸಿ ಸಾಧ್ಯವಾದದ್ದನ್ನು ಅವರಿಗೆ ತೋರಿಸಿಕೊಟ್ಟವರು. ಈ ಶಿಕ್ಷಕರ ದಿನದಂದು, ಸರ್ಕಾರವು ಈ ಅಮೂಲ್ಯ ಕೊಡುಗೆಯನ್ನು ಗೌರವದ ವಿಶಿಷ್ಟ ಚಿಹ್ನೆಯೊಂದಿಗೆ ಗೌರವಿಸಲು ನಿರ್ಧರಿಸಿದ್ದು, ಇಂದಿನಿಂದ ಕರ್ನಾಟಕದ ಶಿಕ್ಷಕರು ತಮ್ಮ ಹೆಸರಿನ ಮೊದಲು “Tr” ಎಂಬ ಪೂರ್ವಪ್ರತ್ಯಯವನ್ನು ಹೆಮ್ಮೆಯಿಂದ ಬಳಸಬಹುದಾಗಿದ್ದು, ಇದು ಕೇವಲ ಎರಡು ಅಕ್ಷರಗಳಾಗಿರದೇ, ಇದು ಅವರುಗಳ ಜೀವಿತಾವಧಿಯ ಸೇವೆಯನ್ನು ಪ್ರತಿನಿಧಿಸುತ್ತದೆ. “Tr.” ಎಂಬುದು ಶೀರ್ಷಿಕೆಗಿಂತ ಹೆಚ್ಚಿನದಾಗಿದ್ದು, ಇದು ಇತರರ ಜೀವನವನ್ನು ರೂಪಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟವರಿಗೆ ಸಮಾಜವು ನೀಡುವ ಮನ್ನಣೆಯಾಗಿದೆ ಎಂಬುದನ್ನು ಮನಗಂಡು ಪ್ರತಿಯೊಬ್ಬ ಶಿಕ್ಷಕರಿಗೂ, ಗೌರವ ಸಮರ್ಪಣೆ ಮಾಡುವ ಸಲುವಾಗಿ ದಿನಾಂಕ: 05.09.2026ರ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕರ ಹೆಸರುಗಳ ಪೂರ್ವದಲ್ಲಿ Tr (Teacher-ಶಿಕ್ಷಕ) ಎಂಬ ಶೀರ್ಷಿಕೆಯನ್ನು (Title) ಬಳಸಲು ಸರ್ಕಾರವು ತೀರ್ಮಾನಿಸಿ, ಅದರಂತೆ ಈ ಕೆಳಕಂಡ ಆದೇಶ.

ಸರ್ಕಾರದ ಆದೇಶ ಸಂಖ್ಯೆ:ಇಪಿ 216 ಎಸ್ಎಲ್‌ಬಿ 2026, , 2:05.09.2026.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸಮಾಜದ ನಿರ್ಮಾಣ ಮತ್ತು ಪ್ರಗತಿಯಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶ್ರೇಯೋಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಶಿಕ್ಷಕರ ಅತ್ಯಮೂಲ್ಯವಾದ ಕೊಡುಗೆಯನ್ನು ಸ್ಮರಿಸುತ್ತಾ, ಶಿಕ್ಷಕರ ದಿನಾಚರಣೆಯ ಅಂಗವಾಗಿ ಗೌರವಪೂರ್ವಕವಾಗಿ ಎಲ್ಲಾ ಶಿಕ್ಷಕರುಗಳ ಹೆಸರುಗಳ ಪೂರ್ವದಲ್ಲಿ “Tr” (Teacher) ಎಂಬ ಶೀರ್ಷಿಕೆಯ (Title) ಪೂರ್ವಪ್ರತ್ಯಯವನ್ನು ಇನ್ನು ಮುಂದೆ ಬಳಸಲು ಸರ್ಕಾರವು ಅನುಮತಿ ನೀಡಿ ಆದೇಶಿಸಿದೆ ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರೌಢ) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರು ತಿಳಿಸಿದ್ದಾರೆ.

ಚಿತ್ರಕೃಪೆ: ಎಐ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular