HomeLatest NewsBREAKING: ವರದಕ್ಷಿಣೆ ಕಿರುಕುಳ: ಡ್ಯಾಂಗೆ ಹಾರಿ ಶಿಕ್ಷಕಿ ಆತ್ಮಹತ್ಯೆ

BREAKING: ವರದಕ್ಷಿಣೆ ಕಿರುಕುಳ: ಡ್ಯಾಂಗೆ ಹಾರಿ ಶಿಕ್ಷಕಿ ಆತ್ಮಹತ್ಯೆ

ದೊಡ್ಡಬಳ್ಳಾಪುರ: ಪತಿ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಶಿಕ್ಷಕಿಯೊಬ್ಬರು ವಿಶ್ವೇಷ್ವರಯ್ಯ ಪಿಕಪ್ ಡ್ಯಾಂ ಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ತಪಸ್ಸಿನಹಳ್ಳಿಯ ಮಹಿಳೆ ಪುಷ್ಪವತಿ (30) ಆತ್ಮಹತ್ಯೆಗೆ ಶರಣಾದವರು. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಪುಷ್ಪವತಿ 11 ತಿಂಗಳ ಹಿಂದಷ್ಟೇ ವೇಣು ಎಂಬುವವರನ್ನು ವಿವಾಹವಾಗಿದ್ದರು. ಮದುವೆಯಾಗಿ ಬಂದಾಗಿನಿಂದ ಪತಿ ಹಾಗೂ ಅತ್ತೆ-ಮಾವ ನಿರಂತರವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು.

ಸಾವಿಗೂ ಮುನ್ನ ಪುಷ್ಪವತಿ ಪತಿ ಹಾಗೂ ಅತ್ತೆ-ಮಾವನ ಕಿರುಕುಳ ನೀಡುತ್ತಿರುವ ಬಗ್ಗೆ ನಿವೇಶನ ಕೊಡಿಸುವಂತೆ ಹಾಗೂ ಹಣ ತೆಗೆದುಕೊಂಡು ಬರುವಂತೆ ಪ್ರತಿದಿನ ಹಿಂಸಿಸುತ್ತಿರುವ ಬಗ್ಗೆ ವಿಡಿಯೋ ರೆಕಾರ್ಡ್ ಮಾಡಿ ಕಣ್ಣೀರಿಟ್ಟಿದ್ದಾರೆ. ಅಲ್ಲದೇ ಡೆತ್ ನೋಟ್ ಕೂಡ ಬರೆದಿಟ್ಟು ಪುಷ್ಪವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular