HomeLatest NewsSHOCKING NEWS: ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಮಗಳನ್ನೇ ಹತ್ಯೆಗೈದ ಶಿಕ್ಷಕ!

SHOCKING NEWS: ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಮಗಳನ್ನೇ ಹತ್ಯೆಗೈದ ಶಿಕ್ಷಕ!

ಸಾಂಗ್ಲಿ: ಮಗಳು ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದಾಳೆಂದು ಕೋಪಗೊಂಡ ಶಿಕ್ಷಕ ಮಗಳನ್ನೇ ಹತ್ಯೆಗೈದಿರುವ ಘೋರ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ.

ಸಾಂಗ್ಲಿಯ ಅಟ್ಟಾಡಿ ನೆಲಕರಂಜಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಧೋಂಡಿರಾಮ್ ಭೋಸಲೆ (45) ಮಗಳು ಸಾಧಾನಳನ್ನು ಹತ್ಯೆ ಮಾಡಿದ್ದಾನೆ. ಮಗಳು ಸಾಧಾನ 12ನೇ ತರಗತಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದಾಳೆ ಎಂದು ತೀವ್ರ ಅಸಮಾಧಾನಗೊಂಡಿದ್ದ ಭೋಸಲೆ, ಇದೇ ವಿಚಾರವಾಗಿ ಮಗಳ ಜೊತೆ ಜಗಳವಾಡಿದ್ದ. ಹೆಂಡತಿ ಹಾಗೂ ಮಗನ ಎದುರಲ್ಲೇ ಹಿಟ್ಟು ರುಬ್ಬುವ ಕಲ್ಲಿನ ಮರದ ಹಿಡಿಕೆಯಿಂದ ಮಗಳ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಸಾಧನಾ ಸ್ಥಿತಿ ಚಿಂತಾಜನಕವಾಗಿತ್ತು.

ಆಕೆಯನ್ನು ಸಾಂಗ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಸಾಧನಾಳ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿ ತಂದೆಯನ್ನು ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular