HomeKarnatakaBREAKING NEWS: ಟಿಡಿಪಿ ಶಾಸಕನ ಬೆಂಬಲಿಗನ ಹತ್ಯೆಗೆ ಸಂಚು: ಪೊಲೀಸ್ ಕಾನ್ಸ್ ಟೇಬಲ್ ಅರೆಸ್ಟ್

BREAKING NEWS: ಟಿಡಿಪಿ ಶಾಸಕನ ಬೆಂಬಲಿಗನ ಹತ್ಯೆಗೆ ಸಂಚು: ಪೊಲೀಸ್ ಕಾನ್ಸ್ ಟೇಬಲ್ ಅರೆಸ್ಟ್

ಕೋಲಾರ: ಟಿಡಿಪಿ ಶಾಸಕನ ಬೆಂಬಲಿಗನ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಾನ್ಸ್ ಟೇಬಲ್ ಓರ್ವರನ್ನು ಬಂಧಿಸಿರುವ ಘಟನೆ ನಡೆದಿದೆ.

ಕೋಲಾರ ಗ್ರಾಮಾಂತರ ಠಾಣೆಯ ಕಾನ್ಸ್ ಟೇಬಲ್ ವಿನಾಯಕ್ ಬಂಧಿತ ಆರೋಪಿ. ಆಂಧ್ರ ಪ್ರದೇಶದ ಗಂಗಾವರಂ ಪೊಲಿಸರು ಕಾನ್ಸ್ ಟೇಬಲ್ ವಿನಾಯಕನನ್ನು ಬಂಧಿಸಿದ್ದಾರೆ.

ಟಿಡಿಪಿ ಶಾಸಕನ ಬೆಂಬಲಿಗನ ಹತ್ಯೆಗೆ ವಿನಾಯಕ ಸುಪಾರಿ ನೀಡಿದ್ದ. ಅಪಘಾತ ಮಾಡಿ ಹತ್ಯೆ ಮಾಡುವಂತೆ ಹೇಳಿದ್ದ. ಅಪಘಾತದ ವೇಳೆ ಟಿಡಿಪಿ ಕಾರ್ಯಕರ್ತ ಅದೃಷ್ಟವಶಾತ್ ಬಚಾವ್ ಆಗಿದ್ದ. ಕೊಲೆಗೆ ಉಪಾಯಮಾಡಿ ವಾಹನವನ್ನು ಕೊಟ್ಟು ಸಂಚು ಮಾಡಿದ್ದ. ಈ ಹಿನ್ನೆಲೆಯಲ್ಲಿ ಕಾನ್ಸ್ ಟೇಬಲ್ ವಿರುದ್ಧ ಗಂಗಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ವಿನಾಯಕನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular