HomeBusiness11,781 ಉದ್ಯೋಗಿಗಳ ವಜಾ ಮಾಡಿದ ಟಿಸಿಎಸ್, ಇನ್ಫೋಸಿಸ್

11,781 ಉದ್ಯೋಗಿಗಳ ವಜಾ ಮಾಡಿದ ಟಿಸಿಎಸ್, ಇನ್ಫೋಸಿಸ್

ನವದೆಹಲಿ: ದೇಶದ ಪ್ರಮುಖ ಐಟಿ ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಇನ್ಫೋಸಿಸ್ ಹಣಕಾಸು ವರ್ಷದ ಪ್ರಸಕ್ತ ತ್ರೈಮಾಸಿಕದಲ್ಲಿ ಸುಮಾರು 11.781 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿವೆ.

ಕಳೆದ ತ್ರೈಮಾಸಿಕ ಅವಧಿಯಲ್ಲಿ ಇನ್ಫೋಸಿಸ್ ಮತ್ತು ಟಿಸಿಎಸ್ ಕಂಪನಿಗಳ ಟೆಕ್ಕಿಗಳ ಸಂಖ್ಯೆಯಲ್ಲಿ 13,863 ಉದ್ಯೋಗಿಗಳ ಕಡೆತಗೊಳಿಸಲಾಗಿತ್ತು. ತೃತೀಯ ಥೈಮಾಸಿಕದಲ್ಲಿ ಟಿಸಿಎಸ್ ನಲ್ಲಿ 5680, ಇನ್ಫೋಸಿಸ್ ನಲ್ಲಿ 6101 ಉದ್ಯೋಗಿಗಳ ಕಡಿತ ಮಾಡಲಾಗಿದೆ.

ವೆಚ್ಚ ಸರಿದೂಗಿಸುವುದು ಸೇರಿ ಅನೇಕ ಕಾರಣಗಳಿಂದ ಹಲವಾರು ಕಂಪನಿಗಳು ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಿವೆ. ಭಾರಿ ಸಂಖ್ಯೆಯ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎರಡು ಕಂಪನಿಗಳ ಒಟ್ಟು ಸಂಖ್ಯೆಯು ವರ್ಷದಿಂದ ವರ್ಷಕ್ಕೆ 34,851 ರಷ್ಟು ಕಡಿಮೆಯಾಗಿದೆ. ಹಿಂದಿನ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಿಂದ TCS ನಲ್ಲಿ 10,669 ಮತ್ತು ಇನ್ಫೋಸಿಸ್‌ನಲ್ಲಿ 24,182 ರಷ್ಟು ಜನರ ಸಂಖ್ಯೆ ಕಡಿಮೆಯಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular