HomeEntertainmentಸೆಪ್ಟೆಂಬರ್ 15ಕ್ಕೆ ತೆರೆ ಮೇಲೆ ಬರಲಿದೆ 'ತತ್ಸಮ ತದ್ಭವ'

ಸೆಪ್ಟೆಂಬರ್ 15ಕ್ಕೆ ತೆರೆ ಮೇಲೆ ಬರಲಿದೆ ‘ತತ್ಸಮ ತದ್ಭವ’

ತತ್ಸಮ- ತದ್ಭವ' ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ ನಟಿ ಮೇಘನಾ ರಾಜ್- Kannada Prabha

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಮೇಘನಾ ರಾಜ್ ಅಭಿನಯಿಸಿರುವ ‘ತತ್ಸಮ ತದ್ಭವ’ ಎಂಬ ಕ್ರೈಂ ಥ್ರಿಲ್ಲರ್ ಕಥಾಧಾರಿತ ಸಿನಿಮಾ ಮುಂದಿನ ತಿಂಗಳು ಸೆಪ್ಟೆಂಬರ್ 15 ರಂದು ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ತೆರೆ ಕಾಣುತ್ತಿದೆ.

ಈ ಕುರಿತು ಮೇಘನಾ ರಾಜ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ”ಚಿತ್ರ ಪ್ರಿಯರಿಗೆ ಒಂದು ವಿಶೇಷ ಕ್ರೈಂ ಥ್ರಿಲ್ಲರ್ ತತ್ಸಮ ತದ್ಭವ. ಟೀಸರ್ ನಿಂದಲೇ ಸಂಚಲನ ಮೂಡಿಸಿರುವ ತತ್ಸಮ ತದ್ಭವ ಸೆಪ್ಟೆಂಬರ್ 15ನೇ ತಾರೀಕು‌ ಬಿಡುಗಡೆಯಾಗಲಿದೆ‌” ಎಂದು ಬರೆದುಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಶಾಲ್ ಆತ್ರೇಯ ನಿರ್ದೇಶನದ ಈ ಚಿತ್ರವನ್ನು ಪಿಬಿ ಸ್ಟುಡಿಯೋಸ್ ಪ್ರೊಡಕ್ಷನ್ ಬ್ಯಾನರ್ ನಡಿ ಪನ್ನಗ ಭರಣ, ಚೇತನ್ ನಂಜುಂಡಯ್ಯ ಹಾಗೂ ಸ್ಪೂರ್ತಿ ಅನಿಲ್ ಬಂಡವಾಳ ಹೂಡಿದ್ದು, ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಿರಿಯ ನಟಿ ಶೃತಿ ಸೇರಿದಂತೆ ಅರವಿಂದ್ ಅಯ್ಯರ್, ವೈಷ್ಣವಿ ಭಟ್ ಬಣ್ಣ ಹಚ್ಚಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular