HomeEntertainment'ತತ್ಸಮ ತದ್ಭವ' ಚಿತ್ರದ ಟ್ರೈಲರ್ ರಿಲೀಸ್

‘ತತ್ಸಮ ತದ್ಭವ’ ಚಿತ್ರದ ಟ್ರೈಲರ್ ರಿಲೀಸ್

ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಮೇಘನಾ ರಾಜ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ತತ್ಸಮ ತದ್ಭವ’ ಚಿತ್ರದ ಟ್ರೈಲರ್ ಇಂದು ಬೆಟಲ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಭರ್ಜರಿ ವೀಕ್ಷಣೆ ಪಡೆದಿದ್ದು, ನೋಡುಗರಿಂದ‌ ಸಾಕಷ್ಟು ಲೈಕ್ಸ್ ಗಳು ಬಂದಿವೆ.

ವಿಶಾಲ್ ಆಥ್ರೇಯಾ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಕಥಾಂದರ ಹೊಂದಿರುವ ಈ ಚಿತ್ರದಲ್ಲಿ ಹಿರಿಯ ನಟಿ ಶೃತಿ ಸೇರಿದಂತೆ ದೇವರಾಜ್, ಬಾಲಾಜಿ ಮನೋಹರ್, ಟಿಎಸ್ ನಾಗಾಭರಣ, ಗಿರಿಜಾ ಲೋಕೇಶ್, ವರುಣ್ ಶ್ರೀನಿವಾಸ್, ಮಹತಿ, ವೈಷ್ಣವಿ ಭಟ್, ಅರವಿಂದ್ ಅಯ್ಯರ್ ತೆರೆ ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರವಿ ಆರಾಧ್ಯ ಸಂಕಲನ, ಶ್ರೀನಿವಾಸ್ ರಾಮಯ್ಯ ಛಾಯಾಗ್ರಹಣವಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜನೆ ನೀಡಿದ್ದಾರೆ. ಮುಂದಿನ ತಿಂಗಳು ಸೆಪ್ಟೆಂಬರ್ 15ರಂದು ಈ ಸಿನಿಮಾ ತೆರೆ ಕಾಣಲಿದೆ.

For Latest News Updates, Join Our Whatsapp Community🚩
RELATED ARTICLES

Most Popular