HomeAutoಟ್ರಂಪ್‌ ʼಟಾರಿಫ್‌ʼ ಬಿಸಿ: ಭಾರತದ ವಾಹನ ಷೇರು ಮಾರುಕಟ್ಟೆಯಲ್ಲಿ ಕುಸಿತ !

ಟ್ರಂಪ್‌ ʼಟಾರಿಫ್‌ʼ ಬಿಸಿ: ಭಾರತದ ವಾಹನ ಷೇರು ಮಾರುಕಟ್ಟೆಯಲ್ಲಿ ಕುಸಿತ !

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಮದು ವಾಹನಗಳ ಮೇಲೆ ಶೇ. 25ರಷ್ಟು ಸುಂಕವನ್ನು ಘೋಷಿಸಿದ ಬೆನ್ನಲ್ಲೇ ಭಾರತದ ವಾಹನ ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ.

ಟಾಟಾ ಮೋಟಾರ್ಸ್‌, ಮಹೀಂದ್ರ ಆ್ಯಂಡ್‌ ಮಹೀಂದ್ರಾದಂತಹ ಪ್ರಮುಖ ಕಂಪನಿಗಳ ಷೇರುಗಳು ನೆಲಕಚ್ಚಿವೆ. ಟಾಟಾ ಮೋಟಾರ್ಸ್‌ ಷೇರುಗಳು ಶೇ. 4.83ರಷ್ಟು ಕುಸಿದು, 34.20 ರೂ. ನಷ್ಟ ಅನುಭವಿಸಿವೆ.

ಮಹೀಂದ್ರ ಆ್ಯಂಡ್‌ ಮಹೀಂದ್ರಾ ಷೇರುಗಳು ಸಹ 0.29ರಷ್ಟು ಕುಸಿದು, 7.90 ರೂ. ನಷ್ಟ ಕಂಡಿವೆ. ಆದರೆ, ಮಾರುತಿ ಸುಜುಕಿ ಮಾತ್ರ ಈ ಪರಿಸ್ಥಿತಿಯಲ್ಲೂ ಲಾಭ ಗಳಿಸಿದೆ. ಮಾರುತಿ ಸುಜುಕಿ ಷೇರುಗಳು ಶೇ. 0.57ರಷ್ಟು ಏರಿಕೆ ಕಂಡು, 66.60 ರೂ. ಲಾಭ ಗಳಿಸಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದ್ವಿಚಕ್ರ ವಾಹನ ತಯಾರಕ ಬಜಾಜ್‌ ಆಟೋ ಷೇರುಗಳು ಸಹ 0.16ರಷ್ಟು ಕುಸಿದು, 12.50 ರೂ. ನಷ್ಟ ಅನುಭವಿಸಿವೆ. ಈ ನಡುವೆ ಒಲಾ ಎಲೆಕ್ಟ್ರಿಕ್‌ ಷೇರುಗಳು ಶೇ. 3.59ರಷ್ಟು ಏರಿಕೆ ಕಂಡಿದ್ದು, 1.86 ರೂ. ಲಾಭ ಗಳಿಸಿವೆ. ಒಟ್ಟಾರೆಯಾಗಿ, ಟ್ರಂಪ್‌ ಅವರ ಈ ಟಾರಿಫ್‌ನಿಂದ ಭಾರತದ ವಾಹನ ಮಾರುಕಟ್ಟೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular