ಟಾಟಾ ಮೋಟರ್ಸ್ ನಿಂದ ಹೊಚ್ಚ ಹೊಸ Tata Ace EV 1000 ಬಿಡುಗಡೆ

ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟರ್ಸ್ ಹೊಚ್ಚ ಹೊಸದಾದ ಏಸ್ ಇವಿ 1000 (Ace EV 1000) ಯನ್ನು ಬಿಡುಗಡೆ ಮಾಡುವ ಮೂಲಕ ತನ್ನ ಇ-ಕಾರ್ಗೊ ಸಾರಿಗೆ ಪರಿಹಾರಗಳನ್ನು ಇನ್ನಷ್ಟು ಬಲಪಡಿಸಿಕೊಂಡಿದೆ. ಕಟ್ಟಕಡೆಯ ಮೈಲಿ ತಲುಪಲು ಪೂರಕವಾಗಿ ಈ ವಾಹನವನ್ನು ಕ್ರಾಂತಿಕಾರಕವಾಗಿ ಅಭಿವೃದ್ಧಿಪಡಿಸಲಾಗಿದೆ.

ಇದು ಶೂನ್ಯ ಮಾಲಿನ್ಯ ಹೊರಹೊಮ್ಮುವ ಮಿನಿ ಟ್ರಕ್ ಆಗಿದ್ದು, 1 ಟನ್ ವರೆಗೆ ಪೇಲೋಡ್ ಅನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 161 ಕಿಲೋಮೀಟರ್ ವರೆಗೆ ಕ್ರಮಿಸಬಲ್ಲದು. ತನ್ನ ಗ್ರಾಹಕರಿಂದ ಅತ್ಯಮೂಲ್ಯವಾದ ಸಲಹೆಗಳನ್ನು ಪಡೆದುಕೊಂಡು ಅದಕ್ಕೆ ತಕ್ಕಂತೆ ಈ ಏಸ್ ಇವಿಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ಹೊಸ ಶ್ರೇಣಿಯ ವಾಹನವು ಎಫ್ಎಂಸಿಜಿ, ಬೇವರೇಜಸ್, ಪೇಂಟ್ಸ್ & ಲ್ಯೂಬ್ರಿಕೆಂಟ್ಸ್, ಎಲ್ ಪಿಜಿ & ಡೈರಿ ಉತ್ಪನ್ನಗಳ ಸಾಗಣೆ ಅಗತ್ಯತೆಗಳನ್ನು ಪೂರೈಸಲಿದೆ.

ದೇಶಾದ್ಯಂತ 150 ಕ್ಕೂ ಹೆಚ್ಚು ಎಲೆಕ್ಟ್ರಿಕ್ ವೆಹಿಕಲ್ ಸಪೋರ್ಟ್ ಸೆಂಟರ್ ಗಳ ಬೆಂಬಲದೊಂದಿಗೆ ಈ ಏಸ್ ಇವಿ ವಾಹನವು ಅತ್ಯಾಧುನಿಕ, ಸುಧಾರಿತ ಬ್ಯಾಟರಿ ಮ್ಯಾನೇಜ್ಮೆಂಟ್ ಸಿಸ್ಟಂ, ಫ್ಲೀಟ್ ಎಡ್ಜ್ ಟೆಲಿಮ್ಯಾಟಿಕ್ಸ್ ಸಿಸ್ಟಂ ಮತ್ತು ಅತ್ಯುತ್ತಮ ಸಾಮರ್ಥ್ಯ ಹೊಂದಿದ ವಾಹನವಾಗಿದೆ. ಟಾಟಾ ಸಮೂಹ ಸಂಸ್ಥೆಗಳ ಅಂಗವಾಗಿರುವ Tata UniEVerse ಅಗಾಧವಾದ ಸಾಮರ್ಥ್ಯಗಳನ್ನು ಬಳಸಿಕೊಂಡು ಈ ಏಸ್ ಇವಿಯನ್ನು ಸಿದ್ಧಪಡಿಸಲಾಗಿದೆ. ಗ್ರಾಹಕರಿಗೆ ಸಮಗ್ರ ಇ-ಕಾರ್ಗೊ ಮೊಬಿಲಿಟಿ ಪರಿಹಾರವನ್ನು ನೀಡಲು ದೇಶದ ಪ್ರಮುಖ ಹಣಕಾಸು ಸಂಸ್ಥೆಗಳ ಪಾಲುದಾರಿಕೆಯನ್ನೂ ಸಹ ಹೊಂದಲಾಗಿದೆ. ಇದು ಬಹುಮುಖ ಕಾರ್ಗೊ ಡೆಕ್ ಗಳೊಂದಿಗೆ ಲಭ್ಯವಿದೆ ಮತ್ತು ದೇಶಾದ್ಯಂತ ಎಲ್ಲಾ ಟಾಟಾ ಮೋಟರ್ಸ್ ವಾಣಿಜ್ಯ ವಾಹನಗಳ ಡೀಲರ್ ಶಿಪ್ ಗಳಲ್ಲಿ ಮಾರಾಟವಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read