 ಹೆಚ್ಚು ಮಸಾಲೆಯುಕ್ತ ಆಹಾರವನ್ನು ಮೇಲಿಂದ ಮೇಲೆ ತಿನ್ನುತ್ತಾ ಇರುವವರಿಗೆ ಅಸಿಡಿಟಿ ಸಮಸ್ಯೆ ಬಾಧಿಸದೆ ಇರದು. ಅಂಥವರಿಗೆ ಸುಲಭವಾಗಿ ಜೀರ್ಣವಾಗುವ, ದೇಹಕ್ಕೂ ತಂಪು ಕೊಡುವ ಸಿಂಪಲ್ ರೆಸಿಪಿ ಅಂದರೆ ಸೌತೆಕಾಯಿ ರಾಯ್ತಾ. ಇದನ್ನು ಬಿಸಿ ಬಿಸಿ ಅನ್ನದ ಜೊತೆಗೆ ತಿನ್ನಬಹುದು ಅಥವಾ ಇದೊಂದನ್ನೇ ಹಾಗೆಯೇ ಚಪ್ಪರಿಸಲೂಬಹುದು.

ಸೌತೆಕಾಯಿ ರಾಯ್ತಾ ಮಾಡಲು ಕೇವಲ ಕೆಲವೇ ಪದಾರ್ಥಗಳು ಸಾಕು.
ಹೆಚ್ಚಿದ ಸೌತೆಕಾಯಿ ಒಂದು ಬಟ್ಟಲು
ಒಗ್ಗರಣೆಯಲ್ಲಿ ಬಾಡಿಸಿದ ಹಸಿಮೆಣಸಿನ ಕಾಯಿ 2-3
ಒಂದು ದೊಡ್ಡ ಚಮಚ ತೆಂಗಿನ ತುರಿ
ಜೀರಿಗೆ – ಅರ್ಧ ಚಮಚ
ಮೊಸರು – ಒಂದು ಬಟ್ಟಲು
ಕೊತ್ತಂಬರಿ ಸೊಪ್ಪು – ಸ್ವಲ್ಪ.
ಸೌತೆಕಾಯಿ ರಾಯ್ತಾ ಕೇವಲ 5 ನಿಮಿಷದಲ್ಲಿ ತಯಾರಾಗುವ ರೆಸಿಪಿ. ಎಣ್ಣೆಯಲ್ಲಿ ಬಾಡಿಸಿದ ಹಸಿಮೆಣಸಿನಕಾಯಿ, ಜೀರಿಗೆ, ಕಾಯಿತುರಿ ಇಷ್ಟನ್ನೂ ನುಣ್ಣಗೆ ಮಿಕ್ಸಿ ಮಾಡಿಕೊಂಡು ಹೆಚ್ಚಿದ ಸೌತೆಕಾಯಿಗೆ ಸೇರಿಸಿ. ನಂತರ ಕಡಿದ ಮೊಸರು, ಉಪ್ಪು, ಕೊತ್ತಂಬರಿ ಸೊಪ್ಪು, ಸಾಸಿವೆ ಒಗ್ಗರಣೆ ಇಷ್ಟನ್ನೂ ಸೇರಿಸಿದರೆ ಸೌತೆಕಾಯಿ ರಾಯ್ತಾ ರೆಡಿ.
You Might Also Like
			TAGGED:Taste and eat cucumber		
		
		 Loading ...
 Loading ... 