HomeLive Newsಇಂದು ʼರಿವೆಂಜ್ ವೀಕ್ʼ ನ ಮೊದಲ ಪಂದ್ಯದಲ್ಲಿ ತಮಿಳ್ ತಲೈವಾಸ್ ಹಾಗೂ ಯುಪಿ ಯೋಧಾಸ್ ಫೈಟ್

ಇಂದು ʼರಿವೆಂಜ್ ವೀಕ್ʼ ನ ಮೊದಲ ಪಂದ್ಯದಲ್ಲಿ ತಮಿಳ್ ತಲೈವಾಸ್ ಹಾಗೂ ಯುಪಿ ಯೋಧಾಸ್ ಫೈಟ್

ಪ್ರೊ ಕಬಡ್ಡಿಯ ಪ್ರತಿ ಪಂದ್ಯಗಳು ರೋಚಕತೆಯಿಂದ ಸಾಗುತ್ತಿದ್ದು, ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ಇಂದು ಪ್ರೊ ಕಬಡ್ಡಿಯ ಮೊದಲನೇ ಪಂದ್ಯದಲ್ಲಿ ಎಂಟು ಹಾಗೂ ಒಂಬತ್ತನೇ ಸ್ಥಾನದಲ್ಲಿರುವ ಯುಪಿ ಯೋಧಾಸ್ ಮತ್ತು ತಮಿಳ್ ತಲೈವಾಸ್  ಮುಖಾಮುಖಿಯಾಗುತ್ತಿದ್ದು, ತಮಿಳ್ ತಲೈವಾಸ್ ತಂಡ ಜಯದ  ಹುಡುಕಾಟದಲ್ಲಿದೆ.

ತಮಿಳ್ ತಲೈವಾಸ್ ತಂಡ ಕಳೆದ ಆವೃತ್ತಿಯ ಸಚಿನ್ ತನ್ವಾರ್ ಅವರನ್ನು ದುಬಾರಿ ಬೆಲೆಗೆ ಖರೀದಿ ಮಾಡಿದ್ದು, ಅವರಿಂದ ಅಂದುಕೊಂಡಂತೆ ಸೂಪರ್ ಟೆನ್ ಗಳು ಬರದೆ ಇರುವ ಕಾರಣ ತಮಿಳ್ ತಲೈವಾಸ್ ತಂಡ ಕಂಬ್ಯಾಕ್ ಮಾಡಲು ತುಂಬಾ ಕಷ್ಟಪಡುತ್ತಿದೆ.

ಇನ್ನು ಯುಪಿ ಯೋಧಾಸ್ ತಂಡದಲ್ಲಿ ಮೂರು ರೈಡರ್ ಗಳು ಬೆನ್ನೆಲುಬಾಗಿ ನಿಂತಿದ್ದು. ಈ ಬಾರಿ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ. ಉಭಯ ತಂಡಗಳಿಗೂ ಇಂದು  ತುಂಬಾ ಮುಖ್ಯವಾಗಿದ್ದು, ಯಾವ ತಂಡಕ್ಕೆ ವಿಜಯದ ಮಾಲೆ ಸಿಗಲಿದೆ ಕಾದು ನೋಡಬೇಕಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular