HomeKarnatakaGood News: ತಾಳಗುಪ್ಪ-ಶಿರಸಿ ಕೆಎಸ್ಆರ್‌ಟಿಸಿ ರಾತ್ರಿ ಬಸ್‌, ವೇಳಾಪಟ್ಟಿ

Good News: ತಾಳಗುಪ್ಪ-ಶಿರಸಿ ಕೆಎಸ್ಆರ್‌ಟಿಸಿ ರಾತ್ರಿ ಬಸ್‌, ವೇಳಾಪಟ್ಟಿ

ತಾಳಗುಪ್ಪ ಶಿವಮೊಗ್ಗ ಜಿಲ್ಲೆಯ ಕೊನೆಯ ರೈಲು ನಿಲ್ದಾಣ. ಮೈಸೂರು, ಬೆಂಗಳೂರು ನಗರದಿಂದ ತಾಳಗುಪ್ಪಗೆ ರೈಲು ಸಂಪರ್ಕವಿದೆ. ತಾಳಗುಪ್ಪದಲ್ಲಿ ರೈಲು ಇಳಿದು ಹಲವಾರು ಪ್ರಯಾಣಿಕರು ಉತ್ತರ ಕನ್ನಡ ಜಿಲ್ಲೆಗೆ ಪ್ರಯಾಣಿಸುತ್ತಾರೆ. ಅಂತಹ ಜನರಿಗೆ ಅನುಕೂಲ ಮಾಡಿಕೊಡಲು ಕೆಎಸ್ಆರ್‌ಟಿಸಿ ಹೊಸ ಬಸ್ ಸೇವೆ ಪ್ರಾರಂಭಿಸಿದೆ.

ಕೆಎಸ್ಆರ್‌ಟಿಸಿ ತಾಳಗುಪ್ಪ-ಶಿರಸಿ ನಡುವೆ ರಾತ್ರಿ ಬಸ್ ಸೇವೆಯನ್ನು ಪ್ರಾರಂಭಿಸಿದೆ. ತಾಳಗುಪ್ಪಕ್ಕೆ ರೈಲು ಆಗಮಿಸುವ ಸಮಯಕ್ಕೆ ಹೊಂದಾಣಿಕೆ ಮಾಡಿಕೊಂಡು ಈ ರಾತ್ರಿ ಬಸ್ ಸೇವೆಯನ್ನು ಆರಂಭಿಸಲಾಗಿದೆ.

ಬೆಂಗಳೂರು ನಗರದಿಂದ ರೈಲಿನಲ್ಲಿ ಆಗಮಿಸುವ ಪ್ರಯಾಣಿಕರು ಶಿರಸಿಗೆ ಸಂಚಾರ ನಡೆಸಲು ಅನುಕೂಲ ಮಾಡಿಕೊಡಲು ಕೆಎಸ್‌ಆರ್‌ಟಿಸಿ ತಾಳಗುಪ್ಪ ರೈಲ್ವೆ ನಿಲ್ದಾಣದಿಂದ ಶಿರಸಿಗೆ ರಾತ್ರಿ ಬಸ್ ಸಂಚಾರವನ್ನು ಆರಂಭಿಸಿದೆ. ಪ್ರಯಾಣಿಕರ ಬಸ್ ಸೇವೆ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರು ನಗರದಿಂದ ಮಧ್ಯಾಹ್ನ 3 ಗಂಟೆಗೆ ಹೊರಡುವ ತಾಳಗುಪ್ಪ ಎಕ್ಸ್‌ಪ್ರೆಸ್ ರೈಲು ರಾತ್ರಿ 10 ಗಂಟೆಯ ಒಳಗೆ ತಾಳಗುಪ್ಪ ನಿಲ್ದಾಣವನ್ನು ತಲುಪುತ್ತದೆ. ಈ ರೈಲಿನಲ್ಲಿ ಬರುವ ಪ್ರಯಾಣಿಕರು ರಾತ್ರಿ ವೇಳೆ ಮುಂದೆ ಸಾಗಲು ಪರದಾಡುತ್ತಿದ್ದರು. ಆದ್ದರಿಂದ ಈ ಬಸ್ ಸೇವೆ ಅವರಿಗೆ ಅನುಕೂಲ ಮಾಡಿಕೊಡಲಿದೆ.

ಬಸ್ ಸಮಯ, ಮಾರ್ಗ: ಕೆಎಸ್ಆರ್‌ಟಿಸಿ ತಾಳಗುಪ್ಪ-ಶಿರಸಿ ಬಸ್ ರಾತ್ರಿ 9:45ರ ನಂತರ  ತಾಳಗುಪ್ಪದಿಂದ ಹೊರಟು ಸಿದ್ದಾಪುರ ಮಾರ್ಗವಾಗಿ ಶಿರಸಿಯನ್ನು ತಲುಪಲಿದೆ. ಈ ಬಸ್​ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಯ ಪ್ರಯಾಣಿಕರಿಗೆ ಸಹಾಯಕವಾಗಲಿದೆ.

ಶಿವಮೊಗ್ಗ ನಗರ ನಿಲ್ದಾಣದಿಂದ ಮುಂದೆ ಸಾಗುವ ರೈಲು ಅರಸಾಳು, ಅನಂತಪುರ, ಸಾಗರ ಮೂಲಕ ತಾಳಗುಪ್ಪ ನಿಲ್ದಾಣ ತಲುಪುತ್ತದೆ. ಬೆಂಗಳೂರು,  ಮೈಸೂರಿಗೆ ಸಂಚಾರ ನಡೆಸುವ ಹಲವು ರೈಲುಗಳು ತಾಳಗುಪ್ಪ ನಿಲ್ದಾಣದಿಂದಲೇ ಹೊರಡುತ್ತದೆ.

ತಾಳಗುಪ್ಪ ಉತ್ತರ ಕನ್ನಡ ಜಿಲ್ಲೆಗೆ ಹತ್ತಿರದಲ್ಲಿದ್ದು, ನೂರಾರು ಪ್ರಯಾಣಿಕರು ಪ್ರತಿದಿನ ರೈಲು ಏರಲು ತಾಳಗುಪ್ಪಕ್ಕೆ ಆಗಮಿಸುತ್ತಾರೆ. ರೈಲು ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಕೆಎಸ್ಆರ್‌ಟಿಸಿ ತಾಳಗುಪ್ಪದಿಂದ ಶಿರಸಿಗೆ ಬಸ್ ಸೇವೆ ಆರಂಭಿಸಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular