alex Certify ವೈರಲ್ ವಿಡಿಯೋ | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಾನವೀಯತೆʼ ಇನ್ನೂ ಜೀವಂತವಿದೆ ಎಂಬುದನ್ನು ನಿರೂಪಿಸುತ್ತೆ ಈ ವಿಡಿಯೋ..!

ಶಾಪಿಂಗ್​ ಮಾಲ್​ಗಳಿಂದ ಹಿಡಿದು ಮೆಟ್ರೋ ನಿಲ್ದಾಣಗಳವರೆಗೂ ಎಸ್ಕಲೇಟರ್​ಗಳು ಈಗ ಸಾಮಾನ್ಯವಾಗಿದೆ. ಆದರೆ ಅನೇಕರು ಇಂದಿಗೂ ಎಸ್ಕಲೇಟರ್​ಗಳನ್ನು ಬಳಕೆ ಮಾಡಲು ಹೆದರುತ್ತಾರೆ. ಈ ನಡುವೆ ಸೋಶಿಯಲ್​ ಮೀಡಿಯಾದಲ್ಲಿ ಲುಕಾ ಲೊಬುನೊ Read more…

ಚಲಿಸುತ್ತಿದ್ದ ಮೆಟ್ರೋದಲ್ಲಿ ಯುವಕನಿಗೆ ಕಪಾಳ ಮೋಕ್ಷ : ಯುವತಿ ವಿಡಿಯೋ ವೈರಲ್​

ಕಳೆದ ಕೆಲವು ದಿನಗಳಿಂದ ದೆಹಲಿ ಮೆಟ್ರೋ ಪ್ರಯಾಣದ ಸಂದರ್ಭದಲ್ಲಿ ಸಾಕಷ್ಟು ಘರ್ಷಣೆಗಳು ನಡೆಯುತ್ತಿರುವ ವಿಡಿಯೋಗಳು ಒಂದಾದರ ಮೇಲೊಂದರಂತೆ ವೈರಲ್​ ಆಗುತ್ತಲೇ ಇದೆ. ಕುಳಿತುಕೊಳ್ಳುವ ವಿಚಾರಗಳ ಜಗಳ, ಟೀ ಶರ್ಟ್ Read more…

ಸಂಸದರ ನಿಧಿಯಲ್ಲಿ ಮನೆ ಕಟ್ಟಿ ಮಗನ ಮದುವೆ ಮಾಡಿದ ಬಿಜೆಪಿ ಎಂಪಿ….!

ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ನಾಣ್ನುಡಿ ಇದೆ. ಇಲ್ಲೊಬ್ಬ ಸಂಸದರು ಎರಡೂ ಕಾರ್ಯವನ್ನು ಮಾಡಿದ್ದು, ಆದರೆ ಇದಕ್ಕಾಗಿ ಅವರು ಬಳಸಿಕೊಂಡಿರುವುದು ಸ್ಥಳೀಯ ಪ್ರದೇಶಾಭಿವೃದ್ಧಿಗಾಗಿ ತಮಗೆ Read more…

ಬೈಕ್ ಚಾಲನೆ ಮಾಡುವಾಗಲೇ ಹೃದಯಾಘಾತ; ವ್ಯಕ್ತಿ ಸಾವನ್ನಪ್ಪಿರುವ ವಿಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಇದಕ್ಕೆ ಹಲವು ಕಾರಣಗಳನ್ನು ನೀಡಲಾಗುತ್ತಿದ್ದು, ಹೀಗೆ ಸಾವನ್ನಪ್ಪಿದವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದೀಗ ಅಂತಹುದೇ ಮತ್ತೊಂದು Read more…

Viral Video | ಸೂಪರ್ ಹಿಟ್ ಸಾಂಗ್ ಗೆ ಕುಣಿದ ಗಿಳಿ

ಮಾತನಾಡುವ ಗಿಳಿಗಳು ಯಾವಾಗಲೂ ಮನುಷ್ಯರ ಮಾತನ್ನ ಅನುಕರಿಸುತ್ತವೆ. ಜೊತೆಗೆ ಅವುಗಳು ತಮ್ಮ ವರ್ತನೆಯಿಂದ ಜನರನ್ನ ರಂಜಿಸುತ್ತವೆ. ಅಂಥದ್ದೇ ರಂಜನೆಯ ವಿಡಿಯೋ ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿದೆ. ಗಿಳಿಯೊಂದು ಪಂಜಾಬಿಯ Read more…

Viral Video | ಚಾಲಕರ ಸಮಸ್ಯೆ ಅರಿಯಲು ನಡುರಾತ್ರಿ ಟ್ರಕ್ ಏರಿದ ರಾಹುಲ್

ಭಾರಿ ವಾಹನಗಳ ಚಾಲಕರ ಸಮಸ್ಯೆ ಅರಿಯಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಡರಾತ್ರಿ ಟ್ರಕ್ ಏರಿ ಪ್ರಯಾಣಿಸಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ಕಾಂಗ್ರೆಸ್ Read more…

ಮೋದಿ ಕಾಲಿಗೆರಗಿ ಆಶೀರ್ವಾದ ಪಡೆದುಕೊಂಡ ಪಪುವಾ ನ್ಯೂಗಿನಿಯಾ ಪ್ರಧಾನಿ….!

ಜಪಾನಿನ ಹಿರೋಷಿಮಾದಲ್ಲಿ ನಡೆದ ಜಿ7 ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಂಡಿದ್ದು, ಆ ಬಳಿಕ ಅವರು ಭಾನುವಾರದಂದು ದ್ವೀಪರಾಷ್ಟ್ರ ಪಪುವಾ ನ್ಯೂಗಿನಿಯಾಗೆ ಭೇಟಿ ನೀಡಿದ್ದಾರೆ. ಸೂರ್ಯಾಸ್ತದ ಬಳಿಕ ವಿದೇಶಿ Read more…

ಗುಜರಾತ್ ಸಿಎಂ ಎದುರು ನಿದ್ರೆಗೆ ಜಾರಿದ ಅಧಿಕಾರಿ; ವಿಡಿಯೋ ವೈರಲ್ ಆಗುತ್ತಲೇ ಸಸ್ಪೆಂಡ್

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಪಾಲ್ಗೊಂಡಿದ್ದ ಕಾರ್ಯಕ್ರಮದ ವೇಳೆಯಲ್ಲಿ ಅಧಿಕಾರಿಯೊಬ್ಬರು ಗಾಢ ನಿದ್ರೆಗೆ ಜಾರಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಅವರನ್ನು ಈಗ ಸಸ್ಪೆಂಡ್ ಮಾಡಲಾಗಿದೆ. Read more…

ಉದ್ಘಾಟನೆಗೊಂಡ ದಿನವೇ ‘ವಂದೇ ಭಾರತ್’ ಎಕ್ಸ್ ಪ್ರೆಸ್ ಚಾವಣಿಯಿಂದ ಸುರಿದ ಮಳೆ ನೀರು; ವಿಡಿಯೋ ವೈರಲ್

ಮಂಗಳವಾರದಂದು ಕೇರಳದ ಚೊಚ್ಚಲ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದರು. ಅದೇ ದಿನ ಸಂಜೆ ಭಾರಿ ಮಳೆ ಸುರಿದಿದ್ದು, ಇದರ ಪರಿಣಾಮ Read more…

ಮನ ಕಲಕುತ್ತೆ ಸ್ಕೂಲ್ ಬ್ಯಾಗ್ ಹೊರಲು ಬಾಲಕಿ ಪರದಾಡಿದ ವಿಡಿಯೋ….!

ವಿದ್ಯಾಭ್ಯಾಸದ ಹೆಸರಲ್ಲಿ ಶಾಲಾ ಮಕ್ಕಳಿಗೆ ಪಠ್ಯಪುಸ್ತಕಗಳ ಹೊರೆಯನ್ನು ಹೇರಬಾರದು. ಈ ಮೂಲಕ ಅವರುಗಳಿಗೆ ಒತ್ತಡ ನೀಡಬಾರದು ಎಂದು ಶಿಕ್ಷಣ ತಜ್ಞರು ಹೇಳುತ್ತಲೇ ಇರುತ್ತಾರೆ. ಆದರೂ ಕೂಡ ವಿದ್ಯಾರ್ಥಿಗಳ ಬವಣೆ Read more…

ನೆಚ್ಚಿನ ಶಿಕ್ಷಕಿ ಕೈಗೆ ಕೋಲು ಕೊಟ್ಟು ಹೊಡೆಸಿಕೊಂಡ ಹಳೆ ವಿದ್ಯಾರ್ಥಿಗಳು; ಗುರು – ಶಿಷ್ಯರ ಸಂಬಂಧ ಸಾರುವ ಭಾವುಕ ವಿಡಿಯೋ ವೈರಲ್

ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬುದನ್ನು ಅರಿತು ಅವರನ್ನು ತಿದ್ದಿ ತೀಡಿ ಸತ್ಪ್ರಜೆಗಳನ್ನಾಗಿ ಮಾಡಲು ಪ್ರಯತ್ನಿಸುತ್ತಾರೆ. ಹಾಗೆಯೇ ವಿದ್ಯಾರ್ಥಿಗಳ ಮುಂದಿನ Read more…

Watch | ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಸೀಟ್ ಗಳಿಗೆ ಬಣ್ಣ ಬಳಿದ ಎಂ.ಎಸ್. ಧೋನಿ; ವಿಡಿಯೋ ವೈರಲ್

ಚುಟುಕು ಕ್ರಿಕೆಟ್ ಪ್ರಿಯರ ನೆಚ್ಚಿನ ಐಪಿಎಲ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಐಪಿಎಲ್ ಹದಿನಾರನೇ ಆವೃತ್ತಿಯ ಹರಾಜು ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದ್ದು, ಮಾರ್ಚ್ 31 ರಿಂದ ಪಂದ್ಯಗಳು ಆರಂಭವಾಗುತ್ತಿವೆ. ಮಹೇಂದ್ರ Read more…

ಬಾಲಕಿಯ ಸೊಂಟವನ್ನೇ ಕತ್ತರಿಸಿದ್ದ ಜಾದೂಗಾರ; ಆದರೂ ಚಲಿಸುತ್ತಿದ್ದವು ಕಾಲುಗಳು; ಈ ವಿಡಿಯೋದ ಅಸಲಿಯತ್ತು ಇಲ್ಲಿದೆ ನೋಡಿ….!

ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಚಿತ್ರ ವಿಚಿತ್ರ ವೀಡಿಯೊಗಳು ಹರಿದಾಡುತ್ತಲೇ ಇರುತ್ತವೆ. ಅದರಲ್ಲೂ ಜಾದೂಗೆ ಸಂಬಂಧಪಟ್ಟ ವಿಡಿಯೋಗಳಂತೂ ಸಿಕ್ಕಾಪಟ್ಟೆ ವೈರಲ್‌ ಆಗುತ್ತವೆ. ಜಾದೂಗಾರರ ಚಮತ್ಕಾರಗಳು ಜನರಿಗೆ ಮೋಡಿ ಮಾಡುತ್ತವೆ. ಕೆಲವರು Read more…

ಎಲೆಕ್ಟ್ರಿಕ್ ಆಟೋದಲ್ಲಿ ಬಿಲ್ ಗೇಟ್ಸ್ ಸವಾರಿ; ವಿಡಿಯೋ ವೈರಲ್

ಭಾರತ ಭೇಟಿಯಲ್ಲಿರುವ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಎಲೆಕ್ಟ್ರಿಕ್ ಆಟೋರಿಕ್ಷಾದಲ್ಲಿ ಸವಾರಿ ಮಾಡಿದ್ದಾರೆ. ಈ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಬಿಲಿಯನೇರ್ ಬಿಲ್ ಗೇಟ್ಸ್ ತಮ್ಮ ಇನ್‌ಸ್ಟಾಗ್ರಾಮ್ Read more…

WATCH: ಬೆನ್ನಿ ದಯಾಳ್ ಹಾಡುತ್ತಿದ್ದಾಗಲೇ ತಲೆಗೆ ಬಡಿದ ಡ್ರೋನ್; ಕುಸಿದು ಕುಳಿತ ಗಾಯಕ

ಖ್ಯಾತ ಹಿನ್ನೆಲೆ ಗಾಯಕ ಬೆನ್ನಿ ದಯಾಳ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹಾಡು ಹೇಳುತ್ತಿದ್ದ ವೇಳೆ ಇದನ್ನು ಸೆರೆ ಹಿಡಿಯುತ್ತಿದ್ದ ಡ್ರೋನ್ ಕ್ಯಾಮೆರಾ ನಿಯಂತ್ರಣ ತಪ್ಪಿ ಅವರ ತಲೆಗೆ ಬಡಿದಿದೆ. ಇದರ Read more…

ಕೂಡಲೇ ಚುನಾವಣಾ ದಿನಾಂಕ ಘೋಷಿಸಲು ಸಿದ್ದರಾಮಯ್ಯ ಆಗ್ರಹ; ಇದರ ಹಿಂದಿದೆ ಈ ಕಾರಣ

ಕರ್ನಾಟಕ ವಿಧಾನಸಭೆಗೆ ಕೂಡಲೇ ಚುನಾವಣಾ ದಿನಾಂಕ ಘೋಷಿಸುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ. ಅಲ್ಲದೆ ಕಾಂಗ್ರೆಸ್ ನಿಯೋಗ ತೆರಳಿ ಈ ಕುರಿತಂತೆ ಮನವಿ ಪತ್ರ Read more…

ಜಿಂಕೆ ಎದುರಿಗೆ ಇದ್ದರೂ ಸುಮ್ಮನೆ ನಡೆದ ಹುಲಿ: ಅಚ್ಚರಿ ವಿಡಿಯೋ ವೈರಲ್‌

ಪ್ರಾಣಿಗಳು ಹೊಟ್ಟೆ ತುಂಬಿದರೆ ಯಾರ ತಂಟೆಗೂ ಬರುವುದಿಲ್ಲ. ಅಂಥ ಕೆಟ್ಟ ಗುಣ ಇರುವುದು ಮನುಷ್ಯರಿಗೆ ಮಾತ್ರ, ಎಷ್ಟೇ ಶ್ರೀಮಂತನಾದರೂ, ಹೊಟ್ಟೆ ತುಂಬಿದ್ದರೂ ಇನ್ನಷ್ಟು ಮತ್ತಷ್ಟು ಹಪಾಹಪಿ ಮಾಡುವ ಕ್ರೂರ Read more…

ಕೇಸರಿ ಪೇಟ ತೊಡಲು ನಿರಾಕರಿಸಿದ ಸಿದ್ದರಾಮಯ್ಯ…!

ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಪ್ರಚಾರ ಕಾರ್ಯ ಆರಂಭಿಸಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜಂಟಿಯಾಗಿ ರಾಜ್ಯದಾದ್ಯಂತ ಪ್ರವಾಸ ನಡೆಸುತ್ತಿದ್ದಾರೆ. ಮಂಗಳವಾರದಂದು Read more…

Shocking Video | ತಾತ – ಮೊಮ್ಮಗ ಹೋಗುವಾಗಲೇ ಭೀಕರ ಅಪಘಾತ; ಪುಟ್ಟ ಬಾಲಕನ ದೇಹವನ್ನು ಕಿಲೋಮೀಟರ್ ವರೆಗೆ ಎಳೆದೊಯ್ದ ಟ್ರಕ್

ಹಿರಿಯ ವ್ಯಕ್ತಿಯೊಬ್ಬರು ತಮ್ಮ ಮೊಮ್ಮಗನನ್ನು ಕರೆದುಕೊಂಡು ಸ್ಕೂಟರ್ ನಲ್ಲಿ ಮಾರುಕಟ್ಟೆಗೆ ಹೋಗುವಾಗ ಟ್ರಕ್ ಒಂದು ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದರೆ ಆರು ವರ್ಷದ ಬಾಲಕ Read more…

5 ವರ್ಷದ ಬಾಲಕನಿಗೆ ಕಠಿಣ ಪದಗಳಿಂದ ನಿಂದನೆ; ಕೈಮುರಿಯುವುದಾಗಿ ಬೆದರಿಸಿದ ಶಿಕ್ಷಕಿ

ಶಾಕಿಂಗ್ ಘಟನೆಯೊಂದರಲ್ಲಿ ಶಿಕ್ಷಕಿ ಒಬ್ಬರು ಕೇವಲ ಐದು ವರ್ಷದ ಬಾಲಕನಿಗೆ ಥಳಿಸಿದ್ದಲ್ಲದೆ ಅವಾಚ್ಯ ಪದಗಳಿಂದ ನಿಂದಿಸಿದ್ದು, ಜೊತೆಗೆ ಕೈ ಮುರಿವುದಾಗಿಯೂ ಬೆದರಿಕೆ ಹಾಕಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ Read more…

ವೇಗವಾಗಿ ಬಂದ ಬೈಕುಗಳ ನಡುವೆ ಡಿಕ್ಕಿ; ಹಾರಿ ಬಿದ್ದ ಸವಾರರ ಶಾಕಿಂಗ್ ವಿಡಿಯೋ ಸೆರೆ

ಉತ್ತರ ಪ್ರದೇಶದ ಖುಷಿ ನಗರದಲ್ಲಿ ಶುಕ್ರವಾರ ರಾತ್ರಿ ಭೀಕರ ಅಪಘಾತ ನಡೆದಿದೆ. ಬೈಕುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರರು ಗಾಳಿಯಲ್ಲಿ ಹಾರಿ ಹೋಗಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ Read more…

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮೇಲೆ ಅಭಿಮಾನಿಗಳಿಂದ ಹಣದ ಸುರಿಮಳೆ….!

ಮುಂಬರುವ ವಿಧಾನಸಭಾ ಚುನಾವಣೆಗೆ ಇನ್ನೂ ದಿನಾಂಕ ಘೋಷಣೆಯಾಗಿಲ್ಲವಾದರೂ ಸಹ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಈಗಾಗಲೇ ಪ್ರಚಾರ ಕಾರ್ಯವನ್ನು ಆರಂಭಿಸಿವೆ. ಇದರ ಜೊತೆಗೆ ಆಕಾಂಕ್ಷಿಗಳು ಸಹ ತಮ್ಮ Read more…

ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಯುವಕ ಸಾವು; ಶಾಕಿಂಗ್ ವಿಡಿಯೋ ವೈರಲ್

ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪುತ್ತಿರುವ ಹಲವು ಪ್ರಕರಣಗಳು ಈಗಾಗಲೇ ನಡೆದಿವೆ ಇದೀಗ ಇದಕ್ಕೆ ಮತ್ತೊಂದು ಘಟನೆ ಸೇರ್ಪಡೆಯಾಗಿದೆ. ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ 24 ವರ್ಷದ ಯುವಕನೊಬ್ಬ ತೀವ್ರ Read more…

ಶಿವಮೊಗ್ಗ ನಿಲ್ದಾಣಕ್ಕೆ ಬಂದಿಳಿದ ಮೊದಲ ವಿಮಾನ: ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳಲಿರುವ ಶಿವಮೊಗ್ಗದ ನೂತನ ವಿಮಾನ ನಿಲ್ದಾಣಕ್ಕೆ ಡಿಜಿಸಿಎ ಸೇರಿದಂತೆ ಎಲ್ಲ ಇಲಾಖೆಗಳಿಂದ ಪರವಾನಿಗೆ ದೊರೆತಿದ್ದು, ಹೀಗಾಗಿ ಪರೀಕ್ಷಾರ್ಥದ ಹಿನ್ನೆಲೆಯಲ್ಲಿ ಮಂಗಳವಾರದಂದು Read more…

Video | ಕಾಲಿಗೆ ಹಾಕಿಕೊಂಡಿದ್ದ ‘ಶೂ’ ನಲ್ಲಿ ಬಿಯರ್ ಕುಡಿದು ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದ ಗಾಯಕ…!

ಖ್ಯಾತ ಸಂಗೀತಗಾರ ಹ್ಯಾರಿ ಸ್ಟೈಲ್ಸ್ ಸಂಗೀತ ಕಚೇರಿ ನಡೆಯುವಾಗಲೇ ತನ್ನ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದ್ದಾರೆ. ಕಾಲಿಗೆ ಹಾಕಿಕೊಂಡಿದ್ದ ಶೂ ಕಳಚಿ ಅದರಲ್ಲಿ ಬಿಯರ್ ತುಂಬಿಕೊಂಡು ಕುಡಿದಿದ್ದು, ಇದನ್ನು ನೋಡಿ Read more…

ಬೇಲ್ ಮೇಲೆ ಹೊರ ಬರುತ್ತಿದ್ದಂತೆ ಕ್ರಿಕೆಟಿಗ ಪೃಥ್ವಿ ಶಾ ವಿರುದ್ಧ ಕೇಸ್ ದಾಖಲಿಸಿದ ನಟಿ….!

ಮುಂಬೈನ ಐಷಾರಾಮಿ ರೆಸ್ಟೋರೆಂಟ್ ಬಳಿ ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ನಟಿ Read more…

Shocking Video| ಮದುವೆಗೆ ನಿರಾಕರಣೆ; ಅಪ್ರಾಪ್ತೆಗೆ ಇರಿದು ನಡು ರಸ್ತೆಯಲ್ಲೇ ಎಳೆದೊಯ್ದ ಪಾಪಿ

ಆಘಾತಕಾರಿ ಘಟನೆ ಒಂದರಲ್ಲಿ ಅಪ್ರಾಪ್ತೆ ತನ್ನೊಂದಿಗೆ ಮದುವೆಯಾಗಲು ನಿರಾಕರಿಸಿದಳು ಎಂಬ ಕಾರಣಕ್ಕೆ 47 ವರ್ಷದ ವ್ಯಕ್ತಿಯೊಬ್ಬ ಆಕೆಗೆ ಮನಬಂದಂತೆ ಇರಿದು ನಡು ರಸ್ತೆಯಲ್ಲೇ ಕೂದಲಿಡಿದು ಎಳೆದೊಯ್ಯುವ ಮೂಲಕ ಪೈಶಾಚಿಕತೆ Read more…

ಕರಾಚಿ ಪೊಲೀಸ್ ಮುಖ್ಯಸ್ಥರ ಕಚೇರಿಯಲ್ಲಿ ಗನ್ ಹಿಡಿದು ತಿರುಗಾಡಿದ ಉಗ್ರರ ವಿಡಿಯೋ ವೈರಲ್…!

ಪಾಕಿಸ್ತಾನದ ಕರಾಚಿಯಲ್ಲಿ ಅಲ್ಲಿನ ಪೊಲೀಸ್ ಮುಖ್ಯಸ್ಥರ ಕಚೇರಿ ಮೇಲೆ ದಾಳಿ ನಡೆಸಿದ್ದ ಉಗ್ರರ ತಂಡ ಕಛೇರಿ ವಶಪಡಿಸಿಕೊಳ್ಳಲು ಪ್ರಯತ್ನ ನಡೆಸಿತ್ತು. ಆದರೆ ನಂತರ ನಡೆದ ಕಾರ್ಯಾಚರಣೆಯಲ್ಲಿ ಎಲ್ಲ ಉಗ್ರರನ್ನು Read more…

On camera:: ದೇಗುಲದ ಹೊರಗೆ ಹೂ ಮಾರಾಟ ಮಾಡುತ್ತಿದ್ದ ಬಡ ಮಹಿಳೆಗೆ ಪೊಲೀಸ್ ಅಧಿಕಾರಿಯಿಂದ ಥಳಿತ

ಮಹಾ ಶಿವರಾತ್ರಿ ದಿನದಂದು ದೇಗುಲದ ಹೊರಗೆ ಹೂ ಮಾರಾಟ ಮಾಡುತ್ತಿದ್ದ ಬಡ ಮಹಿಳೆಗೆ ಪೊಲೀಸ್ ಅಧಿಕಾರಿ ಕಪಾಳ ಮೋಕ್ಷ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇದರ ವಿಡಿಯೋ Read more…

ಆತ್ಮಹತ್ಯಾ ಬಾಂಬರ್ ಸ್ಪೋಟಿಸಿಕೊಂಡ ವಿಡಿಯೋ ಹಂಚಿಕೊಂಡ ಪಾಕ್ ಪತ್ರಕರ್ತ; ಬೆಚ್ಚಿ ಬೀಳಿಸುವಂತಿದೆ ಈ ದೃಶ್ಯ

ಪಾಕಿಸ್ತಾನದ ಕರಾಚಿಯಲ್ಲಿ ಕಳೆದ ರಾತ್ರಿ ಪೊಲೀಸ್ ಮುಖ್ಯಸ್ಥರ ಕಚೇರಿ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಶೇರಿಯಾ ಪೈಸಲ್ ನಲ್ಲಿರುವ ಪೊಲೀಸ್ ಮುಖ್ಯಸ್ಥರ ಕಚೇರಿ ದಾಳಿಗೊಳಗಾಗಿದ್ದು, ನಾಲ್ವರು ಉಗ್ರರು ಹಾಗೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...