ಟಿ20 ವಿಶ್ವಕಪ್: ಆಫ್ಘಾನಿಸ್ತಾನದ ಅಬ್ಬರಕ್ಕೆ ಮಣಿದ ಆಸ್ಟ್ರೇಲಿಯಾ

ಇಂದು ನಡೆದ ಟಿ20 ವಿಶ್ವಕಪ್ ನ 48ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಬಲಿಷ್ಠ ಆಸ್ಟ್ರೇಲಿಯಾವನ್ನು ಬಗ್ಗು ಬಡಿಯುವ ಮೂಲಕ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಆರು ಬಾರಿ ಏಕದಿನ ವಿಶ್ವ ಕಪ್ ಟ್ರೋಫಿ ವಿಜೇತರಾಗಿರುವ ಆಸ್ಟ್ರೇಲಿಯಾ ತಂಡಕ್ಕೆ ಸೋಲಿನ ರುಚಿ ತೋರಿಸಿದೆ. ಅಫ್ಘಾನಿಸ್ತಾನ ತಂಡ ಇದಕ್ಕೂ ಮುನ್ನ ಬಲಿಷ್ಠ ತಂಡಗಳಾದ ಪಾಕಿಸ್ತಾನ, ಇಂಗ್ಲೆಂಡ್ ಸೇರಿದಂತೆ ನ್ಯೂಜಿಲ್ಯಾಂಡ್  ತಂಡದ ಎದುರು ಜಯಭೇರಿಯಾಗಿದೆ.  ಇದೀಗ ಮತ್ತೊಂದು ದೊಡ್ಡ ತಂಡವನ್ನು ಸೋಲಿಸುವ ಮೂಲಕ ಹೊಸ ದಾಖಲೆ ಬರೆದಿದೆ

ಇಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ  ಮಾಡಿದ್ದು, ಮೊದಲ ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನದ ಆರಂಭಿಕ ಬ್ಯಾಟ್ಸ್ ಮ್ಯಾನ್ ಗಳಾದ ರಹಮಾನುಲ್ಲಾ ಗುರ್ಬಾಜ್ 49 (60) ರನ್ ಇಬ್ರಾಹಿಂ ಜದ್ರಾನ್  48 (51) ರನ್ ಬಾರಿಸುವ ಮೂಲಕ ಒಳ್ಳೆಯ ಅಡಿಪಾಯ ಹಾಕಿ ಕೊಟ್ಟಿದ್ದಾರೆ. ಇದಾದ ಬಳಿಕ ಯಾವ ಬ್ಯಾಟ್ಸ್ ಮ್ಯಾನ್ ಗಳಿಂದಲೂ ಉತ್ತಮ ಪ್ರದರ್ಶನ ದೊರೆಯದೆ ಇರುವ ಕಾರಣ 148 ರನ್ ಗಳ  ಸಾಧಾರಣ ಮೊತ್ತ ದಾಖಲಿಸಲಾಯಿತು.

ಗುರಿ ಬೆನ್ನೆತ್ತಿದ ಆಸ್ಟ್ರೇಲಿಯಾ ತಂಡ ಅಫ್ಘಾನಿಸ್ತಾನದ ಬೌಲಿಂಗ್ ದಾಳಿಗೆ ತತ್ತರಿಸಿ ಹೋಗಿದೆ. ಮ್ಯಾಕ್ಸ್ ವೆಲ್ ಒಬ್ಬರೇ ಅರ್ಧ ಶತಕ ಬಾರಿಸುವ ಮೂಲಕ ಏಕಾಂಗಿ ಹೋರಾಟ ನಡೆಸಿದ್ದಾರೆ. ಒಟ್ಟಾರೆ ಆಸ್ಟ್ರೇಲಿಯ ತಂಡ 127 ರನ್ ಗಳಿಗೆ ಆಲೌಟಾಗಿದೆ. ಈ ಮೂಲಕ ಅಫ್ಘಾನಿಸ್ತಾನ ತಂಡ 21 ರನ್ ಗಳಿಂದ ಭರ್ಜರಿ ಜಯ ಸಾಧಿಸಿದ್ದು, ಸೆಮಿ ಫೈನಲ್ ಆಸೆಯನ್ನು ಜೀವಂತವಾಗಿಸಿಕೊಂಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read