HomeLive Newsಟಿ20 ವಿಶ್ವಕಪ್; ಸೆಮಿ ಫೈನಲ್ ಗೆ ಲಗ್ಗೆ ಇಟ್ಟ ಆಫ್ಘಾನಿಸ್ತಾನ

ಟಿ20 ವಿಶ್ವಕಪ್; ಸೆಮಿ ಫೈನಲ್ ಗೆ ಲಗ್ಗೆ ಇಟ್ಟ ಆಫ್ಘಾನಿಸ್ತಾನ

ಇಂದು ನಡೆದ ಸೂಪರ್ 8 ನ ಅಂತಿಮ ಪಂದ್ಯದಲ್ಲಿ ಆಫ್ಘಾನಿಸ್ತಾನ ತಂಡ ಬಾಂಗ್ಲಾ ದೇಶದ ಎದುರು ರೋಚಕ ಜಯ ಸಾಧಿಸುವ ಮೂಲಕ ಸೆಮಿ ಫೈನಲ್ ಗೆ ಎಂಟ್ರಿ ಕೊಟ್ಟಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡ ಸೆಮಿ ಫೈನಲ್ ಗೆ ಬರುವ ಅವಕಾಶವನ್ನು ಕಳೆದುಕೊಂಡಿದೆ. ಅಫ್ಘಾನಿಸ್ತಾನ ತಂಡ ಟಿ ಟ್ವೆಂಟಿ ವಿಶ್ವ ಕಪ್ ನ ಸೆಮಿ ಫೈನಲ್ ಪ್ರವೇಶಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ್ದ ಆಫ್ಘಾನಿಸ್ತಾನ ತಂಡ ಕೇವಲ 115 ರನ್ ಗಳ ಸಾಧಾರಣ ಮೊತ್ತ ದಾಖಲಿಸಿತ್ತು, ಮಳೆ ಬಂದ ಕಾರಣ ಡಿ ಎಲ್ ಎಸ್ ಪ್ರಕಾರ ಬಾಂಗ್ಲಾದೇಶ ತಂಡಕ್ಕೆ 19 ಓವರ್ ಗಳಲ್ಲಿ 114 ರನ್ ಗಳಿಸಬೇಕೆಂಬ ಗುರಿ ನೀಡಲಾಯಿತು. ಅಫ್ಘಾನಿಸ್ತಾನ ತಂಡದ ಬೌಲರ್ ಗಳು ಬಾಂಗ್ಲಾದೇಶದ ಬ್ಯಾಟ್ಸ್ ಮ್ಯಾನ್ ಗಳ ಬೆವರಿಳಿಸಿದ್ದಾರೆ. ಲಿಟ್ಟನ್ ದಾಸ್ ಅರ್ಧ ಶತಕ ಸಿಡಿಸುವ ಮೂಲಕ ಏಕಾಂಗಿ ಹೋರಾಟ ನಡೆಸಿದರು ಜಯ ತಂದುಕೊಡಲು ಸಾಧ್ಯವಾಗಿಲ್ಲ, ಕೇವಲ ಎಂಟು ರನ್ ಗಳಿಂದ ಅಫ್ಘಾನಿಸ್ತಾನ ಜಯಭೇರಿಯಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular