HomeLatest NewsT20 World Cup 2026: ತವರಿನಲ್ಲಿ ಶ್ರೀಲಂಕಾಗೆ ಭಾರೀ ಮುಖಭಂಗ; ಕಠಿಣ ಗುರಿ ಬೆನ್ನಟ್ಟಿ ಗೆದ್ದುಬೀಗಿದ...

T20 World Cup 2026: ತವರಿನಲ್ಲಿ ಶ್ರೀಲಂಕಾಗೆ ಭಾರೀ ಮುಖಭಂಗ; ಕಠಿಣ ಗುರಿ ಬೆನ್ನಟ್ಟಿ ಗೆದ್ದುಬೀಗಿದ ಜಿಂಬಾಬ್ವೆ

ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 38ನೇ ಪಂದ್ಯದಲ್ಲಿ ಜಿಂಬಾಬ್ವೆ ಟೂರ್ನಿಯಲ್ಲಿ ಸೋಲಿಲ್ಲದ ಸರದಾರರಾಗಿದ್ದ ಶ್ರೀಲಂಕಾಗೆ ಸೋಲುಣಿಸಿದೆ. ಈ ಮೂಲಕ ಜಿಂಬಾಬ್ವೆ 7 ಅಂಕಗಳೊಂದಿಗೆ ಬಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆರಿಸಿಕೊಂಡು 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 178 ರನ್ ಕಲೆಹಾಕಿ ಜಿಂಬಾಬ್ವೆಗೆ 179 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಜಿಂಬಾಬ್ವೆ 19.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 182 ರನ್ ಬಾರಿಸಿ 6 ವಿಕೆಟ್‌ಗಳ ಗೆಲುವು ದಾಖಲಿಸಿದೆ.

ಶ್ರೀಲಂಕಾ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಪತುಮ್ ನಿಸ್ಸಂಕ 41 ಎಸೆತಗಳಲ್ಲಿ 8 ಬೌಂಡರಿ ಸಹಿತ 62 ರನ್ ಚಚ್ಚಿದರು ಹಾಗೂ ಕುಸಾಲ್ ಪೆರೆರಾ 22 ರನ್ ಬಾರಿಸಿದರು. ಇನ್ನುಳಿದಂತೆ ಕುಸಾಲ್ ಮೆಂಡಿಸ್ 14, ಪವನ್ ರತ್ನಾಯಕೆ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 44 ರನ್ ಬಾರಿಸಿದರು. ಕಮಿಂದು ಮೆಂಡಿಸ್ 7, ನಾಯಕ ದಸುನ್ ಶಣಕ 6, ದುಶನ್ ಹೇಮಂತ ಡಕ್‌ಔಟ್, ದುನಿತ್ ವೆಲ್ಲಲಾಗೆ ಅಜೇಯ 15 ಹಾಗೂ ಯಾವುದೇ ರನ್ ಗಳಿಸದ ಮಹೀಶ್ ತೀಕ್ಷಣ ಅಜೇಯರಾಗಿ ಉಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಿಂಬಾಬ್ವೆ ಪರ ಬ್ಲೆಸಿಂಗ್ ಮುಜರ್‌ಬಾನಿ, ಬ್ರಾಡ್ ಎವನ್ಸ್ ಹಾಗೂ ಗ್ರೇಮ್ ಕ್ರೆಮರ್ ತಲಾ ಎರಡು ವಿಕೆಟ್ ಮತ್ತು ರಯಾನ್ ಬರ್ಲ್ ಒಂದು ವಿಕೆಟ್ ಪಡೆದರು.

ಜಿಂಬಾಬ್ವೆ ಇನ್ನಿಂಗ್ಸ್: ಜಿಂಬಾಬ್ವೆ ಪರ ಆರಂಭಿಕರಾಗಿ ಕಣಕ್ಕಿಳಿದ ಬ್ರಿಯಾನ್ ಬೆನೆಟ್ 48 ಎಸೆತಗಳಲ್ಲಿ 8 ಬೌಂಡರಿ ಸಹಿತ ಅಜೇಯ 63 ರನ್ ಗಳಿಸಿದರು. ತಡಿವನಾಶೆ ಮಾರುಮಾನಿ 34, ರಯಾನ್ ಬರ್ಲ್ 23, ನಾಯಕ ಸಿಕಂದರ್ ರಾಜಾ 26 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 45 ರನ್ ಚಚ್ಚಿದರು. ತಶಿಂಗ ಮುಸೆಕಿವ 1 ಹಾಗೂ ಟೋನಿ ಮುನ್ಯೊಂಗ ಅಜೇಯ 8 ರನ್ ಬಾರಿಸಿದರು.

ಶ್ರೀಲಂಕಾದ ಪರ ದುಶನ್ ಹೇಮಂತ ಎರಡು ವಿಕೆಟ್, ದಸುನ್ ಶಣಕ ಹಾಗೂ ದುನಿತ್ ವೆಲ್ಲಲಾಗೆ ತಲಾ ಒಂದೊಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular