HomeLatest NewsT20 World Cup 2026: ಟೂರ್ನಿ ಆರಂಭ; ಮೊದಲ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸಾಮಾನ್ಯ ಗುರಿ ನೀಡಿದ...

T20 World Cup 2026: ಟೂರ್ನಿ ಆರಂಭ; ಮೊದಲ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸಾಮಾನ್ಯ ಗುರಿ ನೀಡಿದ ನೆದರ್ಲೆಂಡ್ಸ್

ಕೊಲಂಬೊ: ಪ್ರೇಮದಾಸ ಕ್ರೀಡಾಂಗಣದಲ್ಲಿ 2026ರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೆದರ್ಲೆಂಡ್ಸ್ ತಂಡಗಳು ಮುಖಾಮುಖಿಯಾಗಿವೆ.

ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡ ಪಾಕಿಸ್ತಾನ ಎದುರಾಳಿ ನೆದರ್ಲೆಂಡ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ನೆದರ್ಲೆಂಡ್ಸ್ 19.5 ಓವರ್‌ಗಳಲ್ಲಿ 147ಕ್ಕೆ ಆಲ್‌ಔಟ್ ಆಗಿ ಪಾಕಿಸ್ತಾನಕ್ಕೆ 148 ರನ್‌ಗಳ ಗುರಿಯನ್ನು ನೀಡಿದೆ.

ನೆದರ್ಲೆಂಡ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಮೈಕೆಲ್ ಲೆವಿಟ್ 24, ಮ್ಯಾಕ್ಸ್ ಓಡೌಡ್ 5, ಬಾಸ್ ಡಿ ಲೀಡ್ 30, ಕಾಲಿನ್ ಆಕರ್‌ಮನ್ 20, ಸ್ಕಾಟ್ ಎಡ್ವರ್ಡ್ಸ್ 37, ಜಾಷ್ ಲಯನ್ ಕಾಷೆಟ್ 9, ಲಾಗನ್ ವಾನ್ ಬೀಕ್ ಡಕ್‌ಔಟ್, ಆರ್ಯನ್ ದತ್ 13, ರೋಲಫ್ ವಾನ್‌ಡರ್ ಮೆರ್ವೆ 4, ಪೌಲ್ ವಾನ್ ಮೀಕೆರನ್ ಡಕ್‌ಔಟ್ ಹಾಗೂ ಕೈಲ್ ಕೇನ್ ಅಜೇಯ 2 ರನ್ ಬಾರಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಾಕಿಸ್ತಾನದ ಪರ ಸಲ್ಮಾನ್ ಮಿರ್ಜಾ 3 ವಿಕೆಟ್, ಮೊಹಮ್ಮದ್ ನವಾಜ್, ಸೈಮ್ ಆಯೂಬ್ ಹಾಗೂ ಅಬ್ರಾರ್ ಅಹ್ಮದ್ ತಲಾ ಎರಡು ವಿಕೆಟ್ ಪಡೆದರು. ಇನ್ನುಳಿದಂತೆ ಶಾಹೀನ್ ಅಫ್ರಿದಿ ಒಂದು ವಿಕೆಟ್ ಕಬಳಿಸಿದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

Most Popular