ಕೊಲಂಬೊದ ಆರ್ ಪ್ರೇಮದಾಸ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ( ಫೆಬ್ರವರಿ 11 ) ನಡೆದ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 14ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಐರ್ಲೆಂಡ್ ವಿರುದ್ಧ 67 ರನ್‌ಗಳ ಗೆಲುವನ್ನು ಕಂಡು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿ ಐರ್ಲೆಂಡ್‌ಗೆ 183 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಐರ್ಲೆಂಡ್ 16.5 ಓವರ್‌ಗಳಲ್ಲಿ 115 ರನ್‌ಗೆ ಆಲ್‌ಔಟ್ ಆಗಿದೆ.
ಆಸ್ಟ್ರೇಲಿಯಾ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಟ್ರಾವಿಸ್ ಹೆಡ್ ಕೇವಲ 6 ರನ್‌ಗೆ ರನ್‌ಔಟ್ ಆಗುವ ಮೂಲಕ ತಂಡ ಆರಂಭಿಕ ಆಘಾತ ಅನುಭವಿಸಿತು. ನಂತರ ಎರಡನೇ ವಿಕೆಟ್‌ಗೆ ಜತೆಯಾದ ಜೋಶ್ ಇಂಗ್ಲಿಸ್ ಹಾಗೂ ಕ್ಯಾಮೆರಾನ್ ಗ್ರೀನ್ 49 ರನ್‌ಗಳ ಜತೆಯಾಟವನ್ನಾಡಿದರು. ಜೋಶ್ ಇಂಗ್ಲಿಸ್ 37 ರನ್ ಗಳಿಸಿದರೆ, ಗ್ರೀನ್ 21 ರನ್ ಕಲೆಹಾಕಿದರು. ಬಳಿಕ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್‌ವೆಲ್ 9 ರನ್‌ಗೆ ನಿರ್ಗಮಿಸಿದರು. ಹೀಗೆ ಆಸ್ಟ್ರೇಲಿಯಾ 88 ರನ್‌ಗೆ 4 ವಿಕೆಟ್ ಕಳೆದುಕೊಂಡು ಮತ್ತೆ ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭದಲ್ಲಿ ಐದನೇ ವಿಕೆಟ್‌ಗೆ ಜತೆಯಾದ ಮ್ಯಾಟ್ ರೆನ್ಷಾ ಹಾಗೂ ಮಾರ್ಕಸ್ ಸ್ಟಾಯಿನಿಸ್ 61 ರನ್‌ಗಳ ಜತೆಯಾವನ್ನಾಡಿ ತಂಡಕ್ಕೆ ಸುಧಾರಣೆ ತಂದರು. ಮ್ಯಾಟ್ ರೆನ್ಷಾ 37 ರನ್ ಕಲೆಹಾಕಿದರೆ, ಮಾರ್ಕಸ್ ಸ್ಟಾಯಿನಿಸ್ 29 ಎಸೆತಗಳಲ್ಲಿ 45 ರನ್ ಬಾರಿಸಿದರು. ಇನ್ನುಳಿದಂತೆ ಕೂಪರ್ ಕಾನೊಲಿ ಅಜೇಯ 11 ಹಾಗೂ ಕ್ಷೇವಿಯರ್ ಬಾರ್ಟ್ಲೆಟ್ ಅಜೇಯ 11 ರನ್ ಗಳಿಸಿದರು.
ಐರ್ಲೆಂಡ್ ಪರ ಮಾರ್ಕ್ ಅಡೈರ್ ಎರಡು ವಿಕೆಟ್, ಮ್ಯಾಥ್ಯೂ ಹಂಪ್ರೇಯ್ಸ್, ಜಾರ್ಜ್ ಡಾಕ್ರೆಲ್ ಹಾಗೂ ಹ್ಯಾರಿ ಟೆಕ್ಟರ್ ತಲಾ ಒಂದೊಂದು ವಿಕೆಟ್ ಪಡೆದರು.
ಐರ್ಲೆಂಡ್ ಇನ್ನಿಂಗ್ಸ್: ತಂಡದ ಪರ ಪೌಲ್ ಸ್ಟರ್ಲಿಂಗ್ 1, ರಾಸ್ ಅಡೈರ್ 12, ಹ್ಯಾರಿ ಟೆಕ್ಟರ್ ಡಕ್‌ಔಟ್, ಲಾರ್ಕನ್ ಟಕ್ಕರ್ 24, ಕರ್ಟಿಸ್ ಕ್ಯಾಂಪರ್ 4, ಬೆಂಜಮಿನ್ ಕ್ಯಾಲಿಟ್ಜ್ 2, ಗ್ಯಾರೆತ್ ಡೆಲಾನಿ 11, ಜಾರ್ಜ್ ಡಾಕ್ರೆಲ್ 41, ಮಾರ್ಕ್ ಅಡೈರ್ 12, ಬ್ಯಾರಿ ಮೆಕ್‌ಕ್ಯಾರ್ಥಿ 2 ಹಾಗೂ ಮ್ಯಾಥ್ಯೂ ಹಂಪ್ರೇಯ್ಸ್ ಅಜೇಯ 3 ರನ್ ಗಳಿಸಿದರು.
ಆಸ್ಟ್ರೇಲಿಯಾ ಪರ ನೇಥನ್ ಎಲ್ಲಿಸ್ ಹಾಗೂ ಆಡಂ ಜಂಪಾ ತಲಾ 4 ವಿಕೆಟ್ ಪಡೆದರೆ, ಮ್ಯಾಥ್ಯೂ ಕುನ್ನೆಮನ್ ಒಂದು ವಿಕೆಟ್ ಪಡೆದರು.

