HomeLatest Newsನಮ್ಮವರಿಂದಲೇ ಸೋತೆವು; ಇಂಗ್ಲೆಂಡ್ ವಿರುದ್ಧ ಗೆಲ್ಲಬಹುದಿದ್ದ ಪಂದ್ಯ ಸೋತದ್ದಕ್ಕೆ ಕಾರಣ ಯಾರೆಂದು ತಿಳಿಸಿದ ಶಾಹಿನ್ ಅಫ್ರಿದಿ

ನಮ್ಮವರಿಂದಲೇ ಸೋತೆವು; ಇಂಗ್ಲೆಂಡ್ ವಿರುದ್ಧ ಗೆಲ್ಲಬಹುದಿದ್ದ ಪಂದ್ಯ ಸೋತದ್ದಕ್ಕೆ ಕಾರಣ ಯಾರೆಂದು ತಿಳಿಸಿದ ಶಾಹಿನ್ ಅಫ್ರಿದಿ

ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಿನ್ನೆ ( ಫೆಬ್ರವರಿ 24 ) ನಡೆದ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಸೂಪರ್ 8 ಪಂದ್ಯದಲ್ಲಿ ಇಂಗ್ಲೆಂಡ್ 2 ವಿಕೆಟ್‌ಗಳ ಗೆಲುವನ್ನು ಸಾಧಿಸಿ ಸೆಮಿ ಫೈನಲ್ ಅರ್ಹತೆ ಪಡೆದುಕೊಂಡಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನದ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 164 ರನ್ ಕೆಲಹಾಕಿ ಇಂಗ್ಲೆಂಡ್‌ಗೆ 165 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಬೇಗನೆ ಮೂರು ವಿಕೆಟ್ ಕಳೆದುಕೊಂಡರೂ ನಾಯಕ ಹ್ಯಾರಿ ಬ್ರೂಕ್ ಶತಕದ ನೆರವಿನಿಂದ 19.1 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್ ಕಲೆಹಾಕಿತು.

ಪಾಕ್ ಗುರಿಯನ್ನು ಬೆನ್ನಟ್ಟಲು ಮುಂದಾದ ಇಂಗ್ಲೆಂಡ್‌ನ ಮೊದಲ ನಾಲ್ಕು ವಿಕೆಟ್‌ಗಳನ್ನು ವೇಗವಾಗಿ ಉರುಳಿಸಿದ ಪಾಕಿಸ್ತಾನ ಸುಲಭವಾಗಿ ಗೆಲ್ಲಲಿದ್ದೇವೆ ಎಂಬ ಭರವಸೆಯನ್ನು ಹುಟ್ಟುಹಾಕಿದ್ದರು. ಆದರೆ ಹ್ಯಾರಿ ಬ್ರೂಕ್ ಜವಾಬ್ದಾರಿಯುತ ಶತಕದ ಆಟ ಪಾಕಿಸ್ತಾನದ ಕೈನಲ್ಲಿದ್ದ ಪಂದ್ಯವನ್ನು ಕಸಿದುಕೊಂಡಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗೆ ಗೆಲ್ಲುವ ಸನಿಹಕ್ಕೆ ಬಂದು ಸೋತ ಪಾಕಿಸ್ತಾನದ ಪರ 4 ವಿಕೆಟ್ ಪಡೆದು ಮಿಂಚಿದ ವೇಗಿ ಶಾಹಿನ್ ಶಾ ಅಫ್ರಿದಿ ತಂಡದ ಸೋಲಿಗೆ ತಮ್ಮ ತಂಡದ ಬ್ಯಾಟ್ಸ್‌ಮನ್‌ಗಳು ಕಾರಣ ಎಂದು ಪಂದ್ಯದ ಬಳಿಕ ಹೇಳಿದ್ದಾರೆ.

‘ಪಲ್ಲೆಕೆಲೆಯಂತ ಕ್ರೀಡಾಂಗಣದಲ್ಲಿ ಮಧ್ಯಮ ಓವರ್‌ಗಳಲ್ಲಿ ನೆಲಕಚ್ಚಿ ನಿಂತು ಆಡುವಂತಹ ಬ್ಯಾಟ್ಸ್‌ಮನ್‌ ಬೇಕು ಹಾಗೂ ಒಳ್ಳೆಯ ಜತೆಯಾಟ ಬೇಕು. ಆದರೆ ದುರಾದೃಷ್ಟವಷಾತ್ ನಾವು ಸಾಲು ಸಾಲಾಗಿ ವಿಕೆಟ್ ಕಳೆದುಕೊಂಡೆವು. ಹಾಗಾಗಿಯೇ 180-190 ರನ್ ಕಲೆಹಾಕಲು ಆಗಲಿಲ್ಲ. ಅದೇ ನೀವು ಇಂಗ್ಲೆಂಡ್ ಬ್ಯಾಟಿಂಗ್ ನೋಡಿ, ಹ್ಯಾರಿ ಬ್ರೂಕ್ ನೆಲಕಚ್ಚಿ ನಿಂತು ಸ್ಟ್ರೈಕ್ ಬದಲಿಸುತ್ತಾ ಜತೆಯಾಟ ಕಟ್ಟಿದರು. ಹಾಗಾಗಿ ನಾವು ಜತೆಯಾಟ ಕಟ್ಟುವ ಅವಕಾಶ ಕೈತಪ್ಪಿಸಿಕೊಂಡೆವು ಎನಿಸುತ್ತದೆ. ಜತೆಯಾಟ ಎಂದರೆ ಒಂದು ಅಥವಾ ಎರಡು ರನ್ ಬಾರಿಸುತ್ತಾ ನೆಲಕಚ್ಚಿ ನಿಲ್ಲುವುದು. ಟಿ ಟ್ವೆಂಟಿ ಪಂದ್ಯದಲ್ಲಿ ಒಂದು ಓವರ್‌ಗೆ ಇನ್ನಿಂಗ್ಸ್‌ ಉದ್ದಕ್ಕೂ 8ರಿಂದ 9 ರನ್ ಹರಿದುಬರಬೇಕು, ಹಾಗಿದ್ದರೆ ಮಾತ್ರ ಜತೆಯಾಟ ಬರುತ್ತದೆ. ನನ್ನ ಪ್ರಕಾರ ಮಧ್ಯಮ ಓವರ್‌ಗಳಲ್ಲಿ ಆದಿಲ್ ರಶೀದ್ ಚೆನ್ನಾಗಿ ಬೌಲಿಂಗ್ ಮಾಡಿದರು, ಅವರಿಗೆ ಸಹ ಕ್ರೆಡಿಟ್ ಹೋಗಬೇಕು’ ಎಂದರು. ಈ ಮೂಲಕ ತಮ್ಮ ಬ್ಯಾಟಿಂಗ್ ವಿಭಾಗ ವಿಫಲವಾದ ಕಾರಣ ಪಂದ್ಯ ಸೋತೆವು ಎಂದು ಅಫ್ರಿದಿ ತಿಳಿಸಿದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular