HomeEntertainmentಸೂರಿ ಅಣ್ಣ ಸಿನಿಮಾ ಪ್ರಚಾರಕ್ಕಾಗಿ ಕೀಳುಮಟ್ಟದ ಡ್ರಾಮಾ: FIR ದಾಖಲಾಗುತ್ತಿದ್ದಂತೆ ಪ್ರಾಂಕ್ ಮಾಡಿದ್ದಾಗಿ ಉಲ್ಟಾ ಹೊಡೆದ...

ಸೂರಿ ಅಣ್ಣ ಸಿನಿಮಾ ಪ್ರಚಾರಕ್ಕಾಗಿ ಕೀಳುಮಟ್ಟದ ಡ್ರಾಮಾ: FIR ದಾಖಲಾಗುತ್ತಿದ್ದಂತೆ ಪ್ರಾಂಕ್ ಮಾಡಿದ್ದಾಗಿ ಉಲ್ಟಾ ಹೊಡೆದ ಅಮುಕು ಡುಮುಕು ಮಂಜು

ಬೆಂಗಳೂರು: ಸಿನಿಮಾ ಪ್ರಚಾರಕ್ಕಾಗಿ ಯಾವ ಮಟ್ಟದ ಗಿಮಿಕ್ ಗಳನ್ನು ಬೇಕಾದರೂ ಕೆಲವರು ಮಾಡುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಇತ್ತೀಚೆಗೆ ಕೆಲವರು ತಮ್ಮ ನೆಚ್ಚಿನ ನಟರ ಪ್ರಚಾರಕ್ಕಾಗಿ ಏನೆಲ ಕಸರತ್ತುಗಳನ್ನು ಮಾಡಿ ಪೇಚಿಗೆ ಸಿಲುಕುತ್ತಾರೆ ಎಂಬುದಕ್ಕೆ ಅಮುಕು ಡುಮುಕು ಮಂಜು ಘಟನೆ ಒಂದು ಉದಾಹರಣೆ.

ಸೂರಿ ಅಣ್ಣ ಸಿನಿಮಾ ಪ್ರಚಾರಕ್ಕಾಗಿ ನಕಲಿ ಪೆಟ್ರೋಲ್ ಸೇವಿಸಿದ್ದ ಮಂಜು ಡ್ರಾಮಾ ಎಫ್ ಐಆರ್ ದಾಖಲಾಗುತ್ತಿದ್ದಂತೆ ಬಯಲಾಗಿದೆ. ಸೂರಿ ಅಣ್ಣ ಸಿನಿಮಾಗಾಗಿ ಅಮುಕು ಡುಮುಕು ಮಂಜು ಪೆಟ್ರೋಲ್ ಕುಡಿದಂತೆ ನಾಟವಾಡಿದ್ದ. ಮೆಜೆಸ್ಟಿಕ್ ಥಿಯೇಟರ್ ಒಂದರಲ್ಲಿ ಸೂರಿ ಅಣ್ಣ ಸಿನಿಮ ಅಹಿರೋ ಮುಂದೆ ಮಂಜು ನಕಲಿ ಪೆಟ್ರೋಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಂತೆ ಡ್ರಾಮಾ ಮಾಡಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಉಪ್ಪಾರಪೇಟೆ ಪೊಲೀಸರು ಮಂಜು ವಿರುದ್ಧ ಕೇಸ್ ದಾಖಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆತ್ಮಹತ್ಯೆಗೆ ಯತ್ನಿಸಿದ ಆರೋಪದಲ್ಲಿ ಎಫ್ ಐ ಆರ್ ದಾಖಲಾಗಿದೆ. ಎಫ್ ಐ ಆರ್ ದಾಖಲಾಗುತ್ತಿದ್ದಂತೆ ಎಚ್ಚೆತ್ತ ಮಂಜು, ತಾನು ಮಾಡಿದ್ದೆಲ್ಲವೂ ನಾಟಕ. ಪ್ರಚಾರಕ್ಕಾಗಿ ಮಾಡಿದ ಗಿಮಿಕ್ ಎಂದು ವಿಡಿಯೋ ಹೇಳಿಕೆ ನೀಡಿದ್ದಾನೆ.

ಅಲ್ಲದೇ ನಾನು ಪ್ರಾಂಕ್ ಮಾಡ್ತಿರೋದಾಗಿ ಮೊದಲೇ ಮಾಡಿದ್ದ ವಿಡಿಯೋ ಬಿಡಿಗಡೆ ಮಾಡಿದ್ದಾನೆ. ಜೇನುತುಪ್ಪ, ಜೀರಾ ಪಾನಿಯಾ ಮಿಕ್ಸ್ ಮಾಡಿ ಪೆಟ್ರೋಲ್ ರೀತಿಯಲ್ಲಿ ಕಾಣುವಂತೆ ಪಾನಿಯ ತಯಾರಿಸಿದ್ದಾಗಿ ಹೇಳಿದ್ದಾನೆ. ಒಟ್ಟಾರೆ ಸಿನಿಮಾ ಪ್ರಚಾರಕ್ಕಾಗಿ ಕೀಳುಮಟ್ಟದ ಡ್ರಾಮಾ ಮಾಡಿ ಪೇಚಿಗೆ ಸಿಲುಕಿದ್ದಾನೆ ಸೋಷಿಯಲ್ ಇನ್ ಫ್ಲುಯೆನ್ಸರ್ ಮಂಜು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular