ಬೆಂಗಳೂರು : ಕನ್ನಡದ ನಟ ದರ್ಶನ್ ತೂಗುದೀಪ ಅವರು ಇತ್ತೀಚೆಗೆ ಗಾಯಗೊಂಡ ತಮ್ಮ ಎಡಗೈಗೆ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಶಸ್ತ್ರಚಿಕಿತ್ಸೆ ನಡೆಯಲಿದೆ.
ಗಾಯಗೊಂಡಿರುವ ಕೈಗೆ ವೈದ್ಯರು ಗುರುವಾರ ಶಸ್ತ್ರಚಿಕಿತ್ಸೆ ನಡೆಸಲಿದ್ದು, ಈ ಹಿನ್ನೆಲೆ ಅಭಿಮಾನಿಗಳು ದರ್ಶನ್ ಬೇಗ ಹುಷಾರಾಗಲೆಂದು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಡಿ ಬಾಸ್ ಹೆಸರಿನಲ್ಲಿ ವಿಶೇಷ ಪೂಜೆ ಹಾಗೂ ಅಭಿಷೇಕ ನೆರವೇರಿಸಿ ಬೇಗ ಹುಷಾರಾಗಿ ಬಾಸ್ ಎಂದು ಹಾರೈಸುತ್ತಿದ್ದಾರೆ.
ಡೆವಿಲ್ ಚಿತ್ರದ ಶೂಟಿಂಗ್ ವೇಳೆ ಅವರ ಕೈಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆ ಅವರು ಆಪರೇಷನ್ ಗೆ ಒಳಗಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ನಮ್ಮ ತಂಡ ತೂಗುದೀಪ ಡೈನಾಸ್ಟಿ ವತಿಯಿಂದ ನಾಗೇಂದ್ರ ಬ್ಲಾಕ್ ಆಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಡಿ ಬಾಸ್ ಹೆಸರಿನಲ್ಲಿ ವಿಶೇಷ ಪೂಜೆ ಹಾಗೂ ಅಭಿಷೇಕ ನೆರವೇರಿದೆ..
ಆದಷ್ಟು ಬೇಗ ಹುಷಾರಾಗಿ ಬನ್ನಿ ಬಾಸ್ 🙏🏻❤️#BossOfSandalwood #Dboss #DevilTheHero @dasadarshan 👑 pic.twitter.com/53NZgqcFm4— ಆಪದ್ಬಾಂಧವ (@DbossD56) April 4, 2024

