ಸೂರಜ್ ರೇವಣ್ಣ ವಿರುದ್ಧ ಗಂಭೀರ ಆರೋಪ ಮಾಡಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಸಂತ್ರಸ್ತ

ಹಾಸನ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್, ಲೈಂಗಿಕ ದೌರ್ಜನ್ಯ ಪ್ರಕರಣದ ಬಳಿಕ ಇದೀಗ ಸಹೋದರ ಎಂಎಲ್ ಸಿ ಡಾ.ಸೂರಜ್ ರೇವಣ್ಣ ವಿರುದ್ಧವೂ ಗಂಭೀರ ಆರೋಪ ಕೇಳಿಬಂದಿದೆ. ಯುವಕನೊಬ್ಬ ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ.

ಅರಕಲಗೂಡು ಮೂಲದ ಯುವಕ ಸೂರಜ್ ರೇವಣ್ಣ ವಿರುದ್ಧ ಗಂಭೀರ ಆರೋಪ ಮಾಡಿ ದೂರು ನೀಡಿದ್ದಾನೆ. ಅಲ್ಲದೇ ಇದೀಗ ಸಂತ್ರಸ್ತ ಯುವಕ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ತನ್ನ ಮೇಲೆ ಸೂರಜ್ ದೌರ್ಜನ್ಯ ನಡೆಸಿದ್ದಾಗಿ ಆರೊಪಿಸಿದ್ದಾನೆ.

ಸೂರಜ್ ರೇವಣ್ಣ ತನಗೆ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಪರಿಚಯವಾಗಿದ್ದು, ಜನರನ್ನು ಸೇರಿಸುತ್ತೇನೆ ಎಂಬ ಕಾರಣಕ್ಕೆ ಪರಿಚಯಿಸಿಕೊಂಡಿದ್ದರು. ಸೂರಜ್ ನನ್ನ ಫೋನ್ ನಂಬರ್ ತೆಗೆದುಕೊಂಡಿದ್ದರು. ನಾಲ್ಕು ದಿನಗಳ ಹಿಂದೆ ನನಗೆ ಫೋನ್ ಮಾಡಿ ಕರೆದಿದ್ದರು. ಫ್ರೀಯಾಗಿದ್ದರೆ ಬಾ ಎಂದು ತಿಳಿಸಿದ್ದರು. ಗನ್ನಿಕಡದ ತೋಟದ ಮನೆಗೆ ಹೋಗಿದ್ದ ವೇಳೆ ಬಾಗಿಲು ಹಾಕು ಅಂತಾ ಬಾಗಿಲು ಹಾಕಿಸಿದ್ರು. ಬಳಿಕ ಕೈ ಮೇಲೆ, ಹೆಗಲ ಮೇಲೆಲ್ಲಾ ಕೈ ಹಾಕಿದ್ರು, ಮುಂದೆ ನಡೆಯಬಾರದ ಘಟನೆ ನಡೆಯಿತು ಎಂದು ಆರೋಪಿಸಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರಜ್ ರೇವಣ್ಣ ವಿರುದ್ಧ ಸಂತ್ರಸ್ತ ಯುವಕ ಪ್ರಕರಣ ದಾಖಲಿಸಲು ಮುಂದಾಗಿದ್ದಾಗಿ ತಿಳಿಸಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read