HomeEntertainmentಜನವರಿ 22ಕ್ಕೆ 'Supplier ಶಂಕರ' ಚಿತ್ರದ ಟ್ರೈಲರ್ ರಿಲೀಸ್

ಜನವರಿ 22ಕ್ಕೆ ‘Supplier ಶಂಕರ’ ಚಿತ್ರದ ಟ್ರೈಲರ್ ರಿಲೀಸ್

ರಂಜಿತ್ ಸಿಂಗ್ ರಜಪೂತ್ ನಿರ್ದೇಶನದ ‘ಸಪ್ಲೈಯರ್ ಶಂಕರ’ ಚಿತ್ರದ ಟ್ರೈಲರ್ ಇದೆ ಜನವರಿ 22ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ. ಈ  ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಅನೌನ್ಸ್ ಮಾಡಿದೆ

ಈ ಸಿನಿಮಾದಲ್ಲಿ ನಿಶ್ಚಿತ್ ಕೊರೋಡಿ ನಾಯಕ ನಟನಾಗಿ ಅಭಿನಯಿಸಿದ್ದು, ದೀಪಿಕಾ ಆರಾಧ್ಯ ನಾಯಕಿಯಾಗಿದ್ದಾರೆ. ಇನ್ನುಳಿದಂತೆ ಗೋಪಾಲಕೃಷ್ಣನ್ ದೇಶಪಾಂಡೆ, ನವೀನ್ ಡಿ ಪಡಿಲ್, ಜ್ಯೋತಿರಾಯ್, ಮತ್ತು ವಿಜಯ್ ವಿಶ್ವನಾಥ್ ತೆರೆ ಹಂಚಿಕೊಂಡಿದ್ದಾರೆ.

ತ್ರಿನೇತ್ರ ಫಿಲಂಸ್ ಲಾಂಛನದಲ್ಲಿ ನಾಗೇಂದ್ರ ಸಿಂಗ್ ಹಾಗೂ ಚಂದ್ರಶೇಖರ್ ನಿರ್ಮಿಸಿದ್ದಾರೆ. ಸತೀಶ್ ಚಂದ್ರಯ್ಯ ಸಂಕಲನ, ಸತೀಶ್ ಕುಮಾರ್, ಛಾಯಾಗ್ರಹಣ ಮತ್ತು ಆರ್ ಬಿ ಭರತ್ ಸಂಗೀತವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular