Watch Video | ಗದರ್-2 ಟ್ರೈಲರ್ ಲಾಂಚ್‌ನಲ್ಲಿ ಸನ್ನಿ ಡಿಯೋಲ್, ಅಮೀಶಾ ಪಟೇಲ್ ಮಸ್ತ್‌ ಡಾನ್ಸ್

ಬಾಲಿವುಡ್ ನಟ ಸನ್ನಿ ಡಿಯೋಲ್ ಮತ್ತು ನಟಿ ಅಮೀಶಾ ಪಟೇಲ್ ಗದರ್-2 ಟ್ರೇಲರ್ ಲಾಂಚ್‌ ವೇಳೆ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ. ಗದರ್ ಚಿತ್ರದ ಸೀಕ್ವೆಲ್‌ಗಾಗಿ 12 ವರ್ಷಗಳ ನಂತರ ಕಲಾವಿದರು ಒಂದಾಗಿದ್ದಾರೆ.

ಚಿತ್ರದಲ್ಲಿ ಸನ್ನಿ ಮತ್ತು ಅಮೀಶಾ, ತಾರಾ ಸಿಂಗ್ ಮತ್ತು ಸಕೀನಾ ಪಾತ್ರವನ್ನು ಪುನರಾವರ್ತಿಸುತ್ತಾರೆ. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ, ಸನ್ನಿ ಮತ್ತು ಅಮೀಶಾ ಚಿತ್ರದ ತಮ್ಮ ವೇಷಭೂಷಣಗಳನ್ನು ಧರಿಸಿದ್ದರು. ಸನ್ನಿ ಒಂದು ಜೋಡಿ ಬಿಳಿ ಪೈಜಾಮಾ, ಕಪ್ಪು ಬ್ಲೇಜರ್ ಮತ್ತು ಬೀಜ್ ಪೇಟದೊಂದಿಗೆ ಕೇಸರಿ ಕುರ್ತಾವನ್ನು ಧರಿಸಿದ್ದರೆ, ಅಮೀಶಾ ಕೆಂಪು ಶರರಾ ಉಡುಪನ್ನು ಧರಿಸಿದ್ದರು.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸನ್ನಿ ಮತ್ತು ಅಮೀಶಾ ಟ್ರಕ್ ಮುಂದೆ ನಿಂತು ಫೋಟೋಗಳಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ಧೋಲ್‌ಗಳು ಬಾರಿಸುವ ಶಬ್ಧ ಕಿವಿಗಪ್ಪಳಿಸುತ್ತಿದ್ದಂತೆ ಸನ್ನಿ ಮತ್ತು ಅಮೀಶಾ ಭಾಂಗ್ರಾ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ.

ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ಗದರ್-2 ಟ್ರೈಲರ್ ಬಿಡುಗಡೆಯಾಗಿದೆ. ಅನಿಲ್ ಶರ್ಮಾ, ಸನ್ನಿ ಡಿಯೋಲ್, ಅಮೀಶಾ ಪಟೇಲ್, ಉತ್ಕರ್ಷ್ ಶರ್ಮಾ, ಶಾರಿಕ್ ಪಟೇಲ್, ಸಿಮ್ರತ್ ಕೌರ್, ಮಿಥೂನ್, ಅಲ್ಕಾ ಯಾಗ್ನಿಕ್, ಜುಬಿನ್ ನೌಟಿಯಾಲ್ ಮತ್ತು ಆದಿತ್ಯ ನಾರಾಯಣ್ ಭಾಗವಹಿಸಿದ್ದ ಭವ್ಯ ಸಮಾರಂಭದಲ್ಲಿ ಟ್ರೇಲರ್ ಅನ್ನು ಬಿಡುಗಡೆ ಮಾಡಲಾಯಿತು. 1971 ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ತಾರಾ ಸಿಂಗ್ ಅಲ್ಲಿ ಸಿಕ್ಕಿಬಿದ್ದ ತನ್ನ ಮಗನನ್ನು ರಕ್ಷಿಸಲು ಪಾಕಿಸ್ತಾನಕ್ಕೆ ಹಿಂತಿರುಗುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ.

ಚಿತ್ರದ ಕುರಿತು ಮಾತನಾಡಿದ ಸನ್ನಿ, ಗದರ್: ಏಕ್ ಪ್ರೇಮ್ ಕಥಾಕ್ಕೆ ಅಭಿಮಾನಿಗಳು ನೀಡಿದ ಬೆಂಬಲಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಇದೀಗ ಗದರ್-2 ಎರಡು ಪಟ್ಟು ಆಕ್ಷನ್, ಭಾವನೆಗಳು ಮತ್ತು ಮನರಂಜನೆಯನ್ನು ನೀಡುವುದ್ರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದ್ದಾರೆ. ದೇಶಭಕ್ತಿ, ಹೃದಯಸ್ಪರ್ಶಿಯಾದ ತಂದೆ-ಮಗನ ಬಾಂಧವ್ಯ ಮತ್ತು ಎಲ್ಲಾ ಗಡಿಗಳನ್ನು ಮೀರಿದ ಪ್ರೇಮಕಥೆಯನ್ನು ಸಾರುವ ಕಥೆಯನ್ನು ಮರಳಿ ತರಲು ನಾವು ಉತ್ಸುಕರಾಗಿದ್ದೇವೆ ಎಂದು ನಿರ್ದೇಶಕ ಅನಿಲ್ ಶರ್ಮಾ ಹೇಳಿದ್ರು. ಅಂದಹಾಗೆ, ಈ ಚಿತ್ರ ಆಗಸ್ಟ್ 11 ರಂದು ಬಿಡುಗಡೆಯಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read