HomeBeautyಸನ್ ಟ್ಯಾನ್ ಸಮಸ್ಯೆಗೆ ಮನೆಯಲ್ಲೇ ಇರುವ ವಸ್ತುಗಳಿಂದ ಕಂಡುಕೊಳ್ಳಬಹುದು ಪರಿಹಾರ

ಸನ್ ಟ್ಯಾನ್ ಸಮಸ್ಯೆಗೆ ಮನೆಯಲ್ಲೇ ಇರುವ ವಸ್ತುಗಳಿಂದ ಕಂಡುಕೊಳ್ಳಬಹುದು ಪರಿಹಾರ

ಬೇಸಿಗೆಯಲ್ಲಿ ಸೂರ್ಯನ ಬಿಸಿಲಿಗೆ ಹೊರಹೋದಾಕ್ಷಣ ಸನ್ ಟ್ಯಾನ್ ಆಗುವುದುಂಟು. ಹಾಗೆಂದು ಹಗಲಿಡೀ ಮನೆಯೊಳಗೆ ಕುಳಿತುಕೊಳ್ಳಲು ಸಾಧ್ಯವೇ…? ಟ್ಯಾನಿಂಗ್ ಸಮಸ್ಯೆಗೆ ಮನೆಯಲ್ಲೇ ಇರುವ ವಸ್ತುಗಳಿಂದ ಪರಿಹಾರ ಕಂಡುಕೊಳ್ಳಬಹುದು.

ಟೊಮೆಟೊ ಕತ್ತರಿಸಿ ಒಂದು ಚಮಚದಷ್ಟು ರಸ ತೆಗೆದು ಅದಕ್ಕೆ ನಾಲ್ಕು ಹನಿ ನಿಂಬೆರಸ ಸೇರಿಸಿ ಫೇಸ್ ಮಾಸ್ಕ್ ತಯಾರಿಸಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುಖವನ್ನು ಸ್ವಚ್ಛವಾಗಿ ತೊಳೆದು ಇದನ್ನು ಹಚ್ಚಿ ಅರ್ಧ ಗಂಟೆ ಬಳಿಕ ಮುಖ ತೊಳೆದರೆ ಮುಖ ಸ್ವಚ್ಛವಾಗುತ್ತದೆ.

ಸೂಕ್ಷ್ಮ ತ್ವಚೆ ನಿಮ್ಮದಾಗಿದ್ದರೆ ಇದರ ಬದಲು ಗೋಧಿ ಹಿಟ್ಟು ಹಾಗೂ ರೋಸ್ ವಾಟರ್ ಬೆರೆಸಿ ಪೇಸ್ಟ್ ತಯಾರಿಸಿ. ಇದಕ್ಕೆ ಅರಶಿನ ಪುಡಿ ಚಿಮುಕಿಸಿ. ಮುಖದ ಮೇಲೆ ಹಚ್ಚಿ ಒಣಗಲು ಬಿಡಿ. 20 ನಿಮಿಷದ ಬಳಿಕ ಮುಖ ತೊಳೆದರೆ ಕಲೆ ಮಾಯವಾಗುತ್ತದೆ.

 ಇನ್ನು ಸನ್ ಟ್ಯಾನ್ ಸಮಸ್ಯೆಗೆ ಎಳನೀರಿನ ಒಳಭಾಗವನ್ನೂ ಬಳಸುತ್ತಾರೆ. ಎಳೆಯದಾಗಿರುವ ಒಳಭಾಗಕ್ಕೆ ಅರಿಶಿನ ಪುಡಿ ಹಾಗೂ ಲಿಂಬೆರಸ ಸೇರಿಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ. ಅರ್ಧ ಗಂಟೆ ಬಳಿಕ ಮುಖ ತೊಳೆದರೆ ಕಲೆ ದೂರವಾಗಿ ಮುಖ ಹೊಳಪು ಪಡೆದುಕೊಳ್ಳುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular