ಮಂಡ್ಯ: ಅತ್ಯಾಚಾರ ಪ್ರಕರಣದಲ್ಲಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ಕೋರ್ಟ್ ತೀರ್ಪು ನೀಡಿರುವ ವಿಚಾರವಾಗಿ ಮಾಜಿ ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಅಂಬರೀಷ್, ನ್ಯಾಯಾಲಯದ ಆದೇಶವನ್ನು ಯಾರೇ ಆದರೂ ಪಾಲಿಸಬೇಕು. ಈ ವಿಚಾರದ ಬಗ್ಗೆ ನಾನು ಹೆಚ್ಚು ಕಮೆಂಟ್ ಮಾಡಲ್ಲ ಎಂದಿದ್ದಾರೆ.
ಕೋರ್ಟ್ ತೀರ್ಪು ಕೊಟ್ಟಮೇಲೆ ಮಾತನಾಡಲು ಏನೂ ಇಲ್ಲ. ನ್ಯಾಯಾಲಯ ದೋಷಿ ಎಂದು ಹೇಳಿದ ಮೇಲೆ ಮುಗೀತು. ಏನು ಶಿಕ್ಷೆ ಪ್ರಕಟವಾಗುತ್ತೆ ಎನ್ನುವುದನ್ನು ನೋಡೋಣ ಎಂದು ತಿಳಿಸಿದ್ದಾರೆ.