HomeEntertainment'ಒಂದು ಸರಳ ಪ್ರೇಮ ಕಥೆ' ಚಿತ್ರದ ''ಸುಕೋಮಲೆ'' ಹಾಡು ರಿಲೀಸ್

‘ಒಂದು ಸರಳ ಪ್ರೇಮ ಕಥೆ’ ಚಿತ್ರದ ”ಸುಕೋಮಲೆ” ಹಾಡು ರಿಲೀಸ್

ವಿನಯ್ ರಾಜಕುಮಾರ್ ಅಭಿನಯದ ಸಿಂಪಲ್ ಸುನಿ ನಿರ್ದೇಶನದ ‘ಒಂದು ಸರಳ ಪ್ರೇಮ ಕಥೆ’ ಚಿತ್ರ ಈಗಾಗಲೇ 25 ದಿನಗಳನ್ನು ಪೂರೈಸಿ ತನ್ನ ನಾಗಾಲೋ ಟವನ್ನು ಮುಂದುವರಿಸಿದೆ. ಈ ಸಿನಿಮಾದ ”ಸುಕೋಮಲೆ” ಎಂಬ ವಿಡಿಯೋ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ಕೇಶವ್ ಆನಂದ್ ಧ್ವನಿಯಾಗಿದ್ದು, ನಿರ್ದೇಶಕ ಸಿಂಪಲ್ ಸುನಿ ಸಾಹಿತ್ಯವಿದೆ.

ಈ ಚಿತ್ರವನ್ನು ರಾಮ್ ಮೂವೀಸ್ ಬ್ಯಾನರ್ ನಲ್ಲಿ ಮೈಸೂರು ರಮೇಶ್ ನಿರ್ಮಾಣ ಮಾಡಿದ್ದು, ವೀರ್ ಸಮರ್ಥ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ವಿನಯ್ ರಾಜಕುಮಾರ್ ಸೇರಿದಂತೆ ಮಲ್ಲಿಕಾ ಸಿಂಗ್ ಮತ್ತು ಸ್ವಾತಿಷ್ಟ ಪ್ರಮುಖ ಪಾತ್ರದಲ್ಲಿದ್ದಾರೆ. ಆದಿ ಸಂಕಲನ, ಕಾರ್ತಿಕ್ ಶರ್ಮಾ ಮತ್ತು ಸಭಾ ಕುಮಾರ್ ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular