HomeKarnatakaಮಾಡೆಲ್ ಡೆತ್ ನೋಟ್ ನಲ್ಲಿ ಪ್ರಿಯಕರನ ಹೆಸರು: ಅರೆಸ್ಟ್

ಮಾಡೆಲ್ ಡೆತ್ ನೋಟ್ ನಲ್ಲಿ ಪ್ರಿಯಕರನ ಹೆಸರು: ಅರೆಸ್ಟ್

ಬೆಂಗಳೂರು: ಮಾಡೆಲ್ ವಿದ್ಯಾಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಕರ ಅಕ್ಷಯ್ ಕುಮಾರ್(26) ನನ್ನು ಸೋಲದೇವನಹಳ್ಳಿ ಠಾಣೆ ಪೋಲೀಸರು ಬಂಧಿಸಿದ್ದಾರೆ.

25 ವರ್ಷದ ವಿದ್ಯಾಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ತಾಯಿ ತ್ರಿವೇಣಿ ನೀಡಿದ ದೂರಿನ ಅನ್ವಯ ಅಕ್ಷಯ್ ಕುಮಾರ್ ನನ್ನು ಬಂಧಿಸಲಾಗಿದೆ. ಜುಲೈ 23ರಂದು ವಿದ್ಯಾಶ್ರೀ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಡೈರಿಯಲ್ಲಿ ಅಕ್ಷಯ್ ಕುಮಾರ್ ಹೆಸರು ಬರೆದಿಟ್ಟಿದ್ದು, ಪ್ರಾಥಮಿಕ ತನಿಖೆ ವೇಳೆ ಇದು ಕಂಡು ಬಂದ ಹಿನ್ನೆಲೆಯಲ್ಲಿ ಅಕ್ಷಯ್ ಕುಮಾರ್ ನನ್ನು ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ವಿದ್ಯಾಶ್ರೀ ಬಸವೇಶ್ವರನಗರದ ಜಿಮ್ ಟ್ರೈನರ್ ಆಗಿದ್ದ ಅಕ್ಷಯ್, ವಿದ್ಯಾಶ್ರೀ ಪ್ರೀತಿಸಿದ್ದು, ಅನ್ಯೋನ್ಯವಾಗಿದ್ದರು. ಹಂತ ಹಂತವಾಗಿ ಅಕ್ಷಯ್ ಗೆ 1.60 ಲಕ್ಷ ರೂ.ಗಳನ್ನು ವಿದ್ಯಾಶ್ರೀ ನೀಡಿದ್ದು, ಹಣ ವಾಪಸ್ ಕೇಳಿದ್ದಕ್ಕೆ ಮನ ಬಂದಂತೆ ಬೈದಾಡಿ ಆಕೆಯಿಂದ ದೂರವಾಗಿದ್ದ. ಇದರಿಂದ ನೊಂದ ವಿದ್ಯಾಶ್ರೀ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳ ಸಾವಿಗೆ ಅಕ್ಷಯ್ ಕಾರಣ ಎಂದು ತಾಯಿ ದೂರು ನೀಡಿದ್ದು ಅಕ್ಷಯ್ ನನ್ನು ಬಂಧಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular