ಮನೆಯಲ್ಲೇ ಕೆಎಎಸ್ ಅಧಿಕಾರಿಯ ಪತಿ ಆತ್ಮಹತ್ಯೆ

ಬೆಳಗಾವಿ: ನೇಣು ಹಾಕಿಕೊಂಡು ಕೆಎಎಸ್ ಅಧಿಕಾರಿಯ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ ಆಜಂ ನಗರದ ನಿವಾಸದಲ್ಲಿ ನಡೆದಿದೆ.

ಕೆಎಎಸ್ ಅಧಿಕಾರಿ ರೇಷ್ಮಾ ತಾಳಿಕೋಟೆಯವರ ಪತಿಯಾಗಿರುವ ಎಫ್.ಡಿ.ಎ. ಜಾಫರ್ ಫೀರ್ಜಾದೆ(39) ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ. ಅವರ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ರೇಷ್ಮಾ ಅವರು ಹಿಡಕಲ್ ಜಲಾಶಯ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿದ್ದಾರೆ. ಜಾಫರ್ ಮೃತದೇಹವನ್ನು ಬಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರ ಮಾಡಲಾಗಿದೆ. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read