HomeAstroನಿಮ್ಮ ಈ ಸಮಸ್ಯೆ ಓಡಿಸಿ ಜೀವನ ಸಿಹಿಗೊಳಿಸುತ್ತೆ ಸಕ್ಕರೆ

ನಿಮ್ಮ ಈ ಸಮಸ್ಯೆ ಓಡಿಸಿ ಜೀವನ ಸಿಹಿಗೊಳಿಸುತ್ತೆ ಸಕ್ಕರೆ

ಜೀವನದ ಪ್ರತಿ ಹಂತದಲ್ಲೂ ಸುಖ ಕಾಣಲು ಸಾಧ್ಯವಿಲ್ಲ. ಅನೇಕ ದುಃಖ, ನೋವು, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜೀವನದಲ್ಲಿ ಕಷ್ಟಗಳು ಬಂದಾಗ ಅದನ್ನು ಬಗೆಹರಿಸಲು ಕೆಲ ಉಪಾಯಗಳನ್ನು ಮಾಡಬಹುದು. ದಾಂಪತ್ಯದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ, ಆರ್ಥಿಕ ಕೊರತೆ ಸೇರಿದಂತೆ ಜೀವನದಲ್ಲಿ ನಮ್ಮನ್ನು ಕಾಡುವ ಅನೇಕ ಸಮಸ್ಯೆಗೆ ನಾವು ಸಕ್ಕರೆ ಮೂಲಕ ಪರಿಹಾರ ಕಂಡುಕೊಳ್ಳಬಹುದು.

ಜ್ಯೋತಿಷ್ಯ ಶಾಸ್ತ್ರದಲ್ಲಿ ಸಕ್ಕರೆಗೂ ಮಹತ್ವ ನೀಡಲಾಗಿದೆ. ಕೆಲ ಸಮಸ್ಯೆಗೆ ಸಕ್ಕರೆಯಲ್ಲಿ ಪರಿಹಾರವಿದೆ. ಶನಿಯ ಧೈಯ ಅಥವಾ ಸಾಡೇಸತಿ ಇದ್ದವರು ತೆಂಗಿನಕಾಯಿ ತುರಿಗೆ ಸಕ್ಕರೆ ಬೆರೆಸಿ ಇರುವೆಗಳಿಗೆ ನೀಡಬೇಕು. ಇದ್ರಿಂದ ನಿಮ್ಮ ಕಷ್ಟಗಳು ದೂರವಾಗುತ್ತವೆ.

ದೀರ್ಘಕಾಲದಿಂದ ಒಂದಾದ್ಮೇಲೆ ಒಂದು ತೊಂದರೆ ಎದುರಿಸುತ್ತಿದ್ದೀರಿ ಎಂದಾದ್ರೆ ತಾಮ್ರದ ಪಾತ್ರೆಗೆ ನೀರು ಮತ್ತು ಸಕ್ಕರೆಯನ್ನು ಹಾಕಿ ಪ್ರತಿ ದಿನ ಕುಡಿಯುತ್ತ ಬನ್ನಿ. ಇದ್ರಿಂದ ಸಾಕಷ್ಟು ಲಾಭವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಾತಕದಲ್ಲಿ ಸೂರ್ಯ ದೋಷ ಇರುವವರು ಪ್ರತಿದಿನ ಬೆಳಿಗ್ಗೆ ನೀರಿಗೆ ಸಕ್ಕರೆಯನ್ನು ಬೆರೆಸಿ ಸೂರ್ಯನಿಗೆ ಅರ್ಘ್ಯ ನೀಡಬೇಕು. ಇದರಿಂದ ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚುತ್ತದೆ. ಸಂಪತ್ತು ಪ್ರಾಪ್ತಿಯಾಗುತ್ತದೆ. ತಂದೆಯೊಂದಿಗೆ ಹಳಸಿದ್ದ ಸಂಬಂಧದಲ್ಲಿ ಸುಧಾರಣೆ ಕಾಣಿಸುತ್ತದೆ.

ಅನೇಕ ದಿನಗಳಿಂದ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರೆ ಒಣ ಹಿಟ್ಟಿಗೆ ಸಕ್ಕರೆಯನ್ನು ಬೆರೆಸಿ ಕಾಗೆ, ಇರುವೆಗೆ ನೀಡಬೇಕು. ಇದು ಜೀವನದಲ್ಲಿ ಬಂದ ಸಮಸ್ಯೆಗಳನ್ನು ಬಗೆಹರಿಸುತ್ತದೆ.

ಒಳ್ಳೆಯ ಕೆಲಸಕ್ಕೆ ಹೊರಗೆ ಹೋಗ್ತಿದ್ದರೆ ಮೊದಲ ದಿನ ರಾತ್ರಿ ತಾಮ್ರದ ಪಾತ್ರೆಯಲ್ಲಿ ಸಕ್ಕರೆ ಮತ್ತು ನೀರನ್ನು ಹಾಕಿ ನೆನೆಸಿಡಿ. ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ. ಇದ್ರಿಂದ ನಿಮ್ಮ ಕೆಲಸ ಯಶಸ್ವಿಯಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular