ಇಂಥ ಹುಡುಗಿಯರು ತುಂಬಾ ‘ಅದೃಷ್ಟ’ವಂತರಾಗಿರುತ್ತಾರೆ

ಸಮುದ್ರ ಶಾಸ್ತ್ರದಲ್ಲಿ ಅನೇಕ ಸಂಗತಿಗಳ ಬಗ್ಗೆ ಹೇಳಲಾಗಿದೆ. ಮನುಷ್ಯರ ಅಂಗ, ದೇಹದಲ್ಲಿರುವ ಗುರುತು ಹಾಗೂ ಮಚ್ಚೆಯ ಬಗ್ಗೆಯೂ ವಿವರವಾಗಿ ಹೇಳಲಾಗಿದೆ.

ಯಾವ ಅಂಗ ಹೇಗಿದ್ದರೆ ಶುಭ ಹಾಗೂ ಯಾವುದು ಅಶುಭ ಎಂಬುದನ್ನೂ ಹೇಳಲಾಗಿದೆ. ವಿವಾಹವಾಗುವ ಮೊದಲು ಹುಡುಗಿಯ ಈ ಲಕ್ಷಣಗಳನ್ನು ಪರೀಕ್ಷಿಸಿದ್ರೆ ಆಕೆ ಎಷ್ಟು ಭಾಗ್ಯಶಾಲಿ ಎಂಬುದು ಗೊತ್ತಾಗುತ್ತದೆ.

ಸಮುದ್ರಶಾಸ್ತ್ರದ ಪ್ರಕಾರ, ನೇರವಾದ ಹಾಗೂ ಉದ್ದನೆಯ ಮೂಗಿರುವುದು ಶುಭಕರ. ಹುಡುಗಿಯ ತುಟಿ ಕೆಂಪಗಿದ್ದರೆ ಆಕೆ ಹೆಚ್ಚು ಭಾಗ್ಯಶಾಲಿ ಎನ್ನಲಾಗಿದೆ.

ಕುತ್ತಿಗೆ ಚಿಕ್ಕದಾಗಿದ್ದು, ನಾಲಿಗೆ ಉದ್ದವಿದ್ದರೆ ಅಂಥ ಹುಡುಗಿ ಸುಖ ಹಾಗೂ ಅದೃಷ್ಟವಂತಳಾಗಿರುತ್ತಾಳಂತೆ. ಇಂಥ ಹುಡುಗಿ ಪತಿಯ ಬಗ್ಗೆ ಹೆಚ್ಚು ಕಾಳಜಿ ಹೊಂದಿರುತ್ತಾಳಂತೆ.

ಹುಡುಗಿಯ ಪಾದ ನೇರ ಹಾಗೂ ಸಮತಲವಾಗಿದ್ದರೆ ಶುಭಕರ. ಪಾದಗಳು ಬಿರುಕು ಬಿಟ್ಟಿದ್ದರೆ ಆರ್ಥಿಕ ವಿಷಯದಲ್ಲಿ ಅಮಂಗಳವೆನ್ನಲಾಗುತ್ತದೆ.

ವಿಶಾಲವಾದ ಹಾಗೂ ಊದಿಕೊಂಡ ಕಿವಿಯುಳ್ಳ ಹುಡುಗಿ ಅದೃಷ್ಟವಂತೆ. ಅಂತಹ ಹುಡುಗಿ ಹಣದ ವಿಷಯದಲ್ಲಿ ಬಹಳ ಅದೃಷ್ಟಶಾಲಿಯಾಗಿರುತ್ತಾಳೆ.

ಆಳವಾದ ಹುಕ್ಕಳನ್ನು ಹೊಂದಿರುವ ಹುಡುಗಿ ಅದೃಷ್ಟವಂತಳಾಗಿರುತ್ತಾಳೆ. ಜೊತೆಗೆ ಉದ್ದವಾದ ಕೈಗಳಿರುವುದು ಕೂಡ ಮಂಗಳಕರವೆಂದು ಸಮುದ್ರಶಾಸ್ತ್ರದಲ್ಲಿ ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read