ʼಅಶುಭ ಫಲʼ ನೀಡುತ್ತೆ ಇಂಥ ಮನೆ….! ಖರೀದಿ ಮಾಡುವ ವೇಳೆ ಇರಲಿ ಈ ಬಗ್ಗೆ ಗಮನ

ಒಬ್ಬ ವ್ಯಕ್ತಿ ಯಶಸ್ಸಿಗೆ ಪರಿಶ್ರಮದ ಜೊತೆ ಅದೃಷ್ಟ ಮುಖ್ಯವಾಗುತ್ತದೆ. ಜಾತಕದಲ್ಲಿ ಗ್ರಹಗಳು ದುರ್ಬಲವಾಗಿದ್ದು, ವಾಸ್ತು ಸರಿಯಾಗಿದ್ದರೆ ಕೆಲವೊಮ್ಮೆ ಅದೃಷ್ಟ ಪ್ರಾಪ್ತಿಯಾಗುತ್ತದೆ. ಆದ್ರೆ ಜಾತಕದಲ್ಲಿ ಎಲ್ಲ ಗ್ರಹಗಳು ಸರಿಯಿದ್ದೂ, ವಾಸ್ತು ದೋಷವಿದ್ದಲ್ಲಿ, ಅದೃಷ್ಟ, ದುರಾದೃಷ್ಟಕ್ಕೆ ತಿರುಗುತ್ತದೆ. ಹೊಸ ಮನೆ ಪ್ರವೇಶ ಮಾಡುವ ಮೊದಲು ವಾಸ್ತು ಬಗ್ಗೆ ಸರಿಯಾಗಿ ತಿಳಿದಿರಬೇಕು. ವಾಸ್ತು ಸರಿಯಿಲ್ಲದ ಮನೆ ಪ್ರವೇಶ ಮಾಡಿದಲ್ಲಿ ಅನೇಕ ಸಮಸ್ಯೆ ಎದುರಾಗುತ್ತದೆ.

ದಕ್ಷಿಣ ದಿಕ್ಕಿಗೆ ಬಾಗಿಲಿರುವ ಮನೆಯನ್ನು ಎಂದೂ ಖರೀದಿಸಬೇಡಿ. ಒಂದು ವೇಳೆ ಮನೆ ಖರೀದಿ ಮಾಡಿದ್ದರೆ, ಮನೆ ಬಾಗಿಲನ್ನು ಪೂರ್ವ ಅಥವಾ ಉತ್ತರಕ್ಕೆ ಬದಲಿಸಿ.

ಮನೆಯ ಬಲ-ಎಡ ಅಥವಾ ಹಿಂಭಾಗದಲ್ಲಿ ರಸ್ತೆಯಿದ್ದರೆ ಅದನ್ನು ಮುಳ್ಳು ಅಥವಾ ಬೇರೆ ಯಾವುದೇ ಮಾರ್ಗದಿಂದ ಮುಚ್ಚಬೇಡಿ. ಹೀಗೆ ಮಾಡುವುದರಿಂದ ಮಗುವಿನ ಪ್ರಗತಿ ನಿಲ್ಲುತ್ತದೆ. ಈಗಾಗಲೇ ರಸ್ತೆ ಮುಚ್ಚಿದ್ದರೆ ಪ್ರತಿ ವರ್ಷ 5 ಕೆಜಿಯಷ್ಟು ಉದ್ದಿನ ಬೇಳೆಯನ್ನು ಅಲ್ಲಿ ಹಾಕಿ.

ಮನೆಯ ಮೆಟ್ಟಿಲನ್ನು ಸರಿಯಾಗ ಜಾಗದಲ್ಲಿ ಮಾಡಿ. ಮೆಟ್ಟಿಲಿನ ಕೆಳಗೆ ಬಾತ್ ರೂಮ್ ಅಥವಾ ಅಡುಗೆ ಮನೆಯಿರದಂತೆ ನೋಡಿಕೊಳ್ಳಿ. ಎರಡು ಮೆಟ್ಟಿಲಿನ ಮಧ್ಯೆ ಅಂತರ ಒಂದೇ ಇರಲಿ. ಮೆಟ್ಟಿಲಿನ ಸಂಖ್ಯೆ ಬೆಸ ಸಂಖ್ಯೆಯಾಗಿರಲಿ.

ಶನಿ, ರಾಹು, ಕೇತು ಮನೆಯ ಮೇಲೆ ಕೆಟ್ಟ ಪರಿಣಾಮ ಬೀರಬಾರದೆಂದ್ರೆ, ಮನೆಯ ಹತ್ತಿರ  ಮಾವು ಮತ್ತು ಖರ್ಜೂರದ ಮರ ಇರಬಾರದು. ಮನೆಯ ಹತ್ತಿರ ಮದ್ಯ-ಮಾಂಸಾಹಾರಿ ಅಂಗಡಿ ಇರಬಾರದು. ಮನೆಯ ಹತ್ತಿರ ಕಳ್ಳಿ-ಅಕೇಶಿಯ ಮರಗಳಿರಬಾರದು. ನೆಲಮಾಳಿಗೆಯಿರುವ ಮನೆ ಒಳ್ಳೆಯದಲ್ಲ.

ಯಾವಾಗಲೂ ಶೌಚಾಲಯ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಕೊಳಕಾದ ಶೌಚಾಲಯ, ರಾಹುವಿನ ಕೋಪಕ್ಕೆ ಕಾರಣವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read